ಬಂಟ್ವಾಳ : ಒಂದು ಸಂಘವನ್ನು ಹುಟ್ಟು ಹಾಕುವುದು ಸುಲಭ. ಆದರೆ ಅದನ್ನು ಮುನ್ನಡೆಸುವುದು ಕಷ್ಟ. ಎಷ್ಟೋ ಸಂಘ ಸಂಸ್ಥೆಗಳು ಆಡಂಭರದಿಂದ ಹುಟ್ಟಿ ಮತ್ತೆ ಸದ್ದು ಮಾಡದೆ ಅಳಿದು ಹೋಗುತ್ತದೆ. ಆದರೆ ಸುಮನಸ ಯಕ್ಷ ಬಳಗವು ಈ ರೀತಿಯಾಗದೆ ಸಂಪೂರ್ಣವಾಗಿ ಬೆಳೆಯಬೇಕು. ಇದರ ಸದಸ್ಯರೆಲ್ಲರೂ ಹೂವಿನಂತಹ ಮನಸ್ಸುಳ್ಳವರಾಗಿದ್ದು ಯಕ್ಷ ಬಳಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಯಕ್ಷಗುರುಗಳಾದ ಶ್ರೀ ಯೋಗೀಶ್ ಅಳದಂಗಡಿ ಅಭಿಪ್ರಾಯಪಟ್ಟರು.

19 yakshagana
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವೇದಿಕೆಯಲ್ಲಿ ನಡೆದ ‘ಸುಮನಸ ಯಕ್ಷ ಬಳಗ’ದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಮಾಡಿದ ಯೋಗೀಶ್ ಅಳದಂಗಡಿಯವರು ಈ ಯಕ್ಷ ಬಳಗವು ಯಕ್ಷಗಾನ ಕಲೆ ಬೆಳೆಯುವುದಕ್ಕೆ ಪ್ರಯತ್ನಿಸಲಿ ಎಂದು ಶುಭ ಹಾರೈಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೌನೇಶ್ ವಿಶ್ವಕರ್ಮ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಲೆಗೆ ಪೂರಕವಾಗುವ ಕೆಲಸವನ್ನು ಈ ಸಂಘಟನೆ ಮಾಡಲಿ ಎಂದು ಶುಭಾಶಂಸನೆಗೈದರು. ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಟ್ರಸ್ಟಿ ನಿವೃತ್ತ ಎ.ಎಸ್.ಐ ಆನಂದ ಹಾಗೂ ಸುಮನಸ ಯಕ್ಷ ಬಳಗದ ಹಿರಿಯ ಕಲಾವಿದೆ ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕಿ ಭಾರತಿ ವಸಂತ ಕುಮಾರ್ ಉಪಸ್ಥಿತರಿದ್ದರು.
ಕು| ದೀಪಿಕಾಪ್ರಿಯಾ ಸ್ವಾಗತಿಸಿ, ಕವಿತಾ ಯಾದವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವಪ್ರಸಾದ್ ವಂದಿಸಿದರು. ಚೇತನ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವೇದಿಕೆಯಲ್ಲಿ ಸುಮನಸ ಯಕ್ಷ ಬಳಗದಿಂದ ಶ್ರೀ ದೇವಿ ವೈಷ್ಣವಿ ಎಂಬ ಯಕ್ಷಗಾನ ಬಯಲಾಟ ನಡೆಯಿತು.

 

By suddi9

Leave a Reply

Your email address will not be published. Required fields are marked *