ಮೂಡುಬಿದರೆ: ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಬದ್ರುದ್ದೀನ್ ಗಂಟಾಲ್ಕಟ್ಟೆ ಎಂಬಾತನನ್ನು ಸೋಮವಾರ ಮೂಡುಬಿದರೆ ಪೊಲೀಸರು ಗಂಟಾಲ್ಕಟ್ಟೆಯಲ್ಲಿ ಬಂಧಿಸಿದ್ದಾರೆ.

ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಈತ ಸೋಮವಾರ ಬೆಳಿಗ್ಗೆ ಗಂಟಾಲ್ಕಟ್ಟೆಯಲ್ಲಿ ಬಸ್ ಕಾಯುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಹತ್ತಕ್ಕೇರಿದೆ. ಬಂಧಿತ ಆರೋಪಿ ಬದ್ರುದ್ದೀನ್ ಗಂಟಾಲ್ಕಟ್ಟೆ ಹಾಗೂ ಪೊಲೀಸ್ ಕಸ್ಟಡಿಯಲ್ಲಿದ್ದ ಇತರ ಆರೋಪಿಗಳಾದ ಮಹಮ್ಮದ್ ಹನೀಫ್ ಅದ್ಯಪಾಡಿ, ಮಹಮ್ಮದ್ ಮುಸ್ತಫ ಬಜ್ಪೆ, ಮಹಮ್ಮದ್ ಮುಸ್ತಫ ಕಾವೂರು, ಕಬೀರ್ ಕಂದಾವರ, ಮಹಮ್ಮದ್ ಶರೀಫ್ ತೋಡಾರು, ಇಮ್ತಿಯಾಜ್ ಗಂಟಾಲ್ಕಟ್ಟೆ ಅವರನ್ನು ಪೊಲೀಸರು ಸೋಮವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶರು ಅಕ್ಟೋಬರ್ 31ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರ

By suddi9

Leave a Reply

Your email address will not be published. Required fields are marked *