ಬಂಟ್ವಾಳ: ಸಜೀಪಮುನ್ನೂರು ಗ್ರಾಮ ಮುದೆಲ್‍ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೇವಸ್ಥಾನದ ಶಿಲಾಮಯ ಸುತ್ತುಪೌಳಿಗೆ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಅ. 21ರಂದು ಶಿಲಾನ್ಯಾಸ ಮಾಡಿದರು.
ಬಳಿಕ ಮಾತನಾಡಿದ ಅವರು ಧಾರ್ಮಿಕ ಕೇಂದ್ರಗಳು ಸಮಾಜಕ್ಕೆ ಬೆಳಕು ಇದ್ದಂತೆ. ಸರ್ವ ಜನತೆಯ ಸಹಕಾರದಿಂದ, ಅವರ ಕೊಡುಗೆಯನ್ನು ಪಡೆಯುವ ಮೂಲಕ, ಪಾಲ್ಗೊಳ್ಳುವಿಕೆಯಲ್ಲಿ ದೇವಸ್ಥಾನಗಳ ಕೆಲಸ ಸುಗಮವಾಗಿ ನಡೆಯಬೇಕು. ದೇವಸ್ಥಾನ, ದೈವಸ್ಥಾನ ಎಂಬುದು ಜನ ಸಾಮಾನ್ಯರ ಆರಾಧನ ಕೇಂದ್ರ ಆಗಿರುವಂತೆ ಸಾಂಸ್ಕøತಿಕ ಮತ್ತು ಪಾರಂಪರಿಕ ಮೌಲ್ಯಗಳನ್ನು, ಸಾಮಾಜಿಕ ಆಗುಹೋಗುಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತದೆ. ಧಾರ್ಮಿಕ ಪರಿಷತ್ ವತಿಯಿಂದ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಪ್ರಕಟಿಸಿದರು.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಅವರನ್ನು ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು ಸಮ್ಮಾನಿಸಿದರು ಬಂಟ್ವಾಳ ತಾ.ಪಂ. ಅಧ್ಯಕ್ಷ ಯಶವಂತ ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಶುಭ ಹಾರೈಸಿದರು. ಮುಖ್ಯ ಅತಿಥಿ, ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು ಮಾತನಾಡಿ ನಮ್ಮ ಊರಿನ ಕಾರಣೀಕದ ಕ್ಷೇತ್ರವಾಗಿದೆ. ಇಲ್ಲಿಗೆ ನಾನು ಭಕ್ತಿಯಿಂದ ಬಂದಿದ್ದೇನೆ. ಇಲ್ಲಿಗೆ 2 ಲಕ್ಷ ನೆರವನ್ನು ನೀಡಲು ಬದ್ದ ನಿರುವುದಾಗಿ ಹೇಳಿದರು. ವೇದಿಕೆಯಲ್ಲಿ ತಾ.ಪಂ. ಸದಸ್ಯ ಶರೀಫ್ ಆಲಾಡಿ, ಗ್ರಾ.ಪಂ. ಅಧ್ಯಕ್ಷ ಶರೀಫ್ ನಂದಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ ಸೇವಾ ಕರ್ತ ಕೈಯ್ಯೂರು ನಾರಾಯಣ ಭಟ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್, ದೈವದ ಗುರಿಕಾರ ಕೋಟಿಮಾರ್ತ ಯಾನೆ ಮಂಜುನಾಥ ರೈ ಪರಾರಿಗುತ್ತು, ಕ್ಷೇತ್ರದ ತಂತ್ರಿಗಳಾದ ಸೂರ್ಯನಾರಾಯಣ ತಂತ್ರಿಗಳು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಸ್ವಾಗತಿಸಿದರು. ಎಂ. ಸುಬ್ರಹ್ಮಣ್ಯ ಭಟ್ ವಂದಿಸಿದರು. ಸುರೇಶ್ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು.

