ವಿಟ್ಲ: ವಿಟ್ಲ ಪಂಚಾಯಿತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನು ಅಕ್ರಮ ಸಕ್ರಮದಂತೆ ಮಂಜೂರು ಮಾಡಿಕೊಂಡಿರುವುದು ಅಕ್ರಮವಾಗಿದ್ದು, ಸ್ಮಶಾನ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಗೆ ಮಾತ್ರ ಸಾಗುವಳಿ ಚೀಟಿಯನ್ನು ಮಿತಿಗೊಳಿಸಲು ಮಂಗಳೂರು ಸಹಾಯಕ ಆಯುಕ್ತರು ಮತ್ತು ಬಂಟ್ವಾಳ ತಹಸೀಲ್ದಾರರಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶಿದೆ.

ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಸ.ನಂ 407/3ಎ2ರಲ್ಲಿ 2.25 ಎಕ್ರೆ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿದ್ದು, ಆದರಲ್ಲಿ 1.52 ಎಕ್ರೆ ಭೂಮಿ ಕೆ ವಿಶ್ವನಾಥ ಶೆಟ್ಟಿ ಎಂಬವರ ಹೆಸರಿನಲ್ಲಿ ಮಂಜೂರಾತಿ ಮಾಡಲಾಗಿತ್ತೆಂದು ಹೇಳಲಾಗಿದೆ. ಈ ಭೂಮಿ ಕುಮ್ಕಿ ಹಕ್ಕಾಗಿತ್ತಾದರೂ ಜಿಲ್ಲಾಧಿಕಾರಿಯವರ ಆದೇಶದಂತೆ ವಿರಹಿತಪಡಿಸಿ ಸಾರ್ವಜನಿಕ ಸ್ಮಶಾನಕ್ಕೆ ಕಾದಿರಿಸಿದ ಜಮೀನಾಗಿದೆ.

1995ರಲ್ಲಿ ಸ್ಮಶಾನಕ್ಕೆ ಭೂಮಿಯನ್ನು ಕಾಯ್ದಿರಿಸಿ ಆದೇಶಿಸಿದ್ದು, ಕೆ ವಿಶ್ವನಾಥ ಶೆಟ್ಟಿ ಅವರಿಗೆ 2002ರಲ್ಲಿ ಭೂಮಂಜೂರಾತಿ ಮಾಡಲಾಗಿರುವುದರಿಂದ ಮಂಜೂರಾತಿ ಅಕ್ರಮವಾಗಿದೆ. ಕರ್ನಾಟಕ ಭೂ ಕಂದಾಯ ಕಾಯಿದೆ ಕಲಂ 49ರಡಿ ಪ್ರಶ್ನಿತ ಸ್ಮಶಾನ ಭೂಮಿಯನ್ನು ಸಹಾಯಕ ಆಯುಕ್ತರು ಕಾಯ್ದಿರಿಸಿದ ಆದೇಶವನ್ನು ಪ್ರಶ್ನೆ ಮಾಡಲಾಗಿತ್ತಾದರೂ 2013ರಲ್ಲಿ ಜಿಲ್ಲಾಧಿಕಾರಿಯವರು ವಜಾಗೊಳಿಸಿದ್ದರು. 2014ರಲ್ಲಿ ಸಹಾಯಕ ಆಯುಕ್ತರು ಆದೇಶಿಸಿರುವುದನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ಎತ್ತಿ ಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿದೆ.

ಜಿಲ್ಲಾಧಿಕಾರಿಯವರ ನ್ಯಾಯಾಲದಲ್ಲಿ ಕೆ ವಿಶ್ವನಾಥ ಶೆಟ್ಟಿ ಮೇಲ್ಮನವಿದಾರರಾಗಿದ್ದು, ಮಂಗಳೂರು ಸಹಾಯಕ ಆಯುಕ್ತರು, ವಿ ಭವಾನಿ ಶಂಕರ್, ವಿ ಪ್ರಭಾಕರ್, ಎಂ ಭಾಸ್ಕರ ರೈ, ಎ ವಾಸುದೇವ, ಎಂ ಜನಾರ್ಧನ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಪ್ರತಿವಾದಿಗಳಾಗಿದ್ದರು. ಪ್ರತಿವಾದಿ ವ್ಯಕ್ತಿಗಳ ಪರವಾಗಿ ವಕೀಲ ಎಂ ಸುದರ್ಶನ ಕುಮಾರ್ ವಾದಿಸಿದ್ದರು.

By Suddi9

Leave a Reply

Your email address will not be published. Required fields are marked *