ಬಂಟ್ವಾಳ: ಭಗವಂತನ ಯಾವುದೇ ಶಕಿ ಇದ್ದರೂ ಅದು ಭಾವನೆ ಹಾಗೂ ಭಕ್ತಿಗಿಂತ ಮಿಗಿಲಾದುದು. ನಂಬಿಕೆಯೇ ಅದಕ್ಕೆ ಮೂಲ ಎಂದು ಶ್ರೀ ಧಾಮ ಮಾನಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಸಜೀಪಮುನ್ನೂರು ಮಾಗಣೆಯ ಮತರ್ಾಜೆಗುತ್ತು ಶ್ರೀ ನಾಗಬ್ರಹ್ಮ, ರಕ್ತೇಶ್ವರೀ ಹಾಗೂ ಶ್ರೀ ಮಲರಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಮಾನವನ ಇತಿಹಾಸ ನೋಡಿದಾಗ ಪ್ರೀತಿಯ ಅರ್ಥ ಅರಿತು ಬದುಕಿದವರನ್ನು ನೋಡಬಹುದು. ಆದರೆ ಇಂದು ಪ್ರೀತಿಯ ಅರ್ಥ ವ್ಯರ್ಥವಾಗುತ್ತಿದೆ. ಸ್ವಾರ್ಥ ಹೆಚ್ಚಾಗುತ್ತಿದೆ. ಇದರಿಂದ ತನ್ನತನವನ್ನು ಕಳೆದುಕೊಳ್ಳುವ ಸ್ಥಿತಿ ನಿಮರ್ಾಣಗೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಸಚಿವ ರಮನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಚಲನ ಚಿತ್ರ ನಟ ಕಾತರ್ಿಕ್ ಬಂಜನ್, ಪ್ರಶಾಂತ್ಕುಲಾಲ್ ನೆಟ್ಲ, ಉದ್ಯಮಿ ಲೋಕೇಶ್ ಪೆದಮಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೀಣೊದ್ದಾರ ಸಮಿತಿಯ ಪರಮೇಶ್ವರ ಎಂ. ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನಕಾರ್ಯದಶರ್ಿ ಉಮಾಕರ ಪ್ರಸ್ತಾವಿಸಿದರು. ಜೊತೆ ಕಾರ್ಯದಶರ್ಿ ನಾಗೇಶ್ ಎಂ. ವಂದಿಸಿದರು. ಸಂತೋಷ್ ಸಿದ್ದಕಟ್ಟೆ ನಿರೂಪಿಸಿದರು.
ಚಿತ್ರ: ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಧಾಮರ್ಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

