ಬಂಟ್ವಾಳ, ಅ. 18: ತುಳುಕೂಟ ಬಂಟ್ವಾಳ ನೂತನ ಅಧ್ಯಕ್ಷರಾಗಿ ಹಿರಿಯ ಸಾಮಾಜಿಕ ನೇತಾರ, ಜಿ. ಪಂ. ಮಾಜಿ ಸದಸ್ಯ ಎ.ಸಿ.ಭಂಡಾರಿ ಪುನರಾಯ್ಕೆಯಾಗಿದ್ದಾರೆ. ಅ. 18ರಂದು ಬಿ.ಸಿ. ರೋಡ್ ಪಿಎಲ್ಡಿ ಬ್ಯಾಂಕ್ ಸಭಾಂಗಣದಲ್ಲಿ ಸಭೆ ನಡೆದಿತ್ತು.
ಉಪಾಧ್ಯಕ್ಷರಾಗಿ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ನಿವೃತ್ತ ಕಂದಾಯ ಅಕಾರಿ ಬಿ.ತಮ್ಮಯ್ಯ, ಪ್ರ. ಕಾರ್ಯದರ್ಶಿಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್, ಕಾರ್ಯದರ್ಶಿಯಾಗಿ ಮನೋಜ್ ದಲಂದಿಲ, ನಾರಾಯಣ ಸಿ. ಪೆರ್ನೆ , ವಿಜಯ ಶೆಟ್ಟಿ ಸಾಲೆತ್ತೂರು, ಕೋಶಾಕಾರಿಯಾಗಿ ಸುಭಾಶ್ಚಂದ್ರ ಜೈನ್, ಸಂಘಟನಾ ಕಾರ್ಯದರ್ಶಿಯಾಗಿ ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷ ರಾಜೇಶ್ ಸುವರ್ಣ, ನಿವೃತ್ತ ಬ್ಯಾಂಕ್ ಅಕಾರಿ ಸೀತಾರಾಮ ಶೆಟ್ಟಿ ಕಾಂತಾಡಿ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ| ತುಕರಾಮ ಪೂಜಾರಿ, ಒಡಿಯೂರು ಕ್ಷೇತ್ರದ ಗ್ರಾಮ ವಿಕಾಸ ಕೇಂದ್ರ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ. ಕೆ. ಇದಿನಬ್ಬ, ಪರಮೇಶ್ವರ ಎಂ., ವಾಸು ಪೂಜಾರಿ, ಸಂಕಪ್ಪ ಶೆಟ್ಟಿ, ಮಂಜು ವಿಟ್ಲ, ಶಿವಶಂಕರ್ ಯನ್, ಪ್ರಕಾಶ್ ಕೋಡಿಮಜಲು, ಜಲಜಾಕ್ಷಿ ಪಾಣೆಮಂಗಳೂರು, ಎಂ. ಡಿ. ದಿನಕರ್, ರಾಜಾ ಬಂಟ್ವಾಳ, ಚಂದ್ರಹಾಸ ನುರ್ತಾಡಿ ಮೊದಲಾದವರನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರ ಪುನರಾಯ್ಕೆ ಬಳಿಕ ಭಂಡಾರಿಯವರು ಮಾತನಾಡಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಲು ವಿವಿದ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದ್ದು ಅದಕ್ಕೆ ಪೂರಕವಾಗಿ ಬಂಟ್ವಾಳ ತಾಲೂಕಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ತಾಲೂಕಿನಾದ್ಯಂತ ವಿವಿಧ ಸಂಘಟನೆಗಳು ತುಳು ಭಾಷೆ ಸಂಸ್ಕೃತಿ ಸಾಹಿತ್ಯ ಬೆಳವಣಿಗೆಗಾಗಿ ದುಡಿಯುತ್ತಿದ್ದು ಅವುಗಳನ್ನೆಲ್ಲಾ ಗುರುತಿಸಿ ಒಂದೇ ವೇದಿಕೆಯ ಅಡಿಯಲ್ಲಿ ತರಲು ಪ್ರಯತ್ನಿಸುವುದಾಗಿ ನುಡಿದರು.
