ಕೈಕಂಬ: ದಿಶಾ ಟ್ರಸ್ಟ್ (ರಿ) ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟ, ಗುರುಪುರ ಮತ್ತು ನೇಸರ ಕೇಂದ್ರಿಯ ಸಮನ್ವಯ ಸಮಿತಿ, ಕೈಕಂಬ ಇವರ ಸಹಯೋಗದಲ್ಲಿ ಅ.15ರಂದು ಗುರುವಾರ ದಿಶಾ ಟ್ರಸ್ಟ್ ವಿಶ್ವರೂಪಸೌಧ ಕೈಕಂಬದಲ್ಲಿ ಉಚಿತ ಹೊಮಿಯೀಪಥಿ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಪಾಸಣಾ ಶಿಬಿರದ ಮುಖ್ಯ ವೈದ್ಯರಾದ ಡಾ/ ರೋಶನ್ ಪಿಂಟೋರವರು ದೀಪ ಬೆಳಗಿಸಿ ನೆರವೇರಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಆರೋಗ್ಯ ಒಂದು ಸಂಪತ್ತು ಮಾನವ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಸುಖ ಶಾಂತಿ ಸಮಾಧಾನದಲಿ ಇ್ಲದ್ದರೆ ಸಮಾಜದಲ್ಲಿ ಸುಖ ಶಾಂತಿ ಇರುತ್ತದೆ. ಇದರಿಂದ ಎಲ್ಲರೂ ಪ್ರೀತಿ ವಿಶ್ವಾಸದಿಂದ ಜೀವಿಸಿ ಆರೋಗ್ಯವಂತ ಸಮಾಜವಾಗಿ ಸಮುದಾಯ ಬಲಿಷ್ಟವಾಗುವುದು ಎಂದರು.
ಹೋಮಿಯೋಪಥಿ ಜೌಷಧಗಳಿಂದ ಯಾವುದೇ ಅಡ್ಡ ಪರಿಣಾಮ ಗಳಿರುವುದಿಲ್ಲ, ಮುಳ್ಳನ್ನು ಮುಳ್ಳಿನಿಂದ ತೆಗೆಯುವುದು ಎಂಬ ಮಾತಿನಂತೆ ಹೋಮಿಯೋಪಥಿ ಜೌಷಧಿಗಳು ರೋಗಿಯ ಜೀವದಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಯಾಗುವಂತೆ ಮಾಡುತ್ತದೆ, ಎಂದು ವಿವರಿಸಿದರು.
ಇನೊರ್ವ ಅತಿಥಿ ಶ್ರೀ ವಿವೇಕ್ ಫೆರ್ನಾಂಡಿಸ್ ಮೆಡಿಕೋ ಸೋಷಿಯಲ್ ವರ್ಕರ್ ಶಿಬಿರದ ಮಹತ್ವ ತಿಳಿಸಿ ಆಸ್ಪತ್ರೆಯಲ್ಲಿ ಸಿಗುವ ವಿವಿಧ ಸೇವೆಗಳ ಬಗ್ಗೆ ವಿವರಿಸಿದರು.
ದಿಶಾ ಸಂಸ್ಥೆಯ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜರವರು ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ವಿವರಿಸಿ ಶಿಬಿರದ ಮುಂದುವರಿಕೆಯಾಗಿ ಮೊಬೈಲ್ ಕ್ಲಿನಿಕನ್ನು ಪ್ರತಿ ತಿಂಗಳಿಗೆ 1 ರಂತೆ ನಿಗದಿತ ದಿನಾಂಕ ದಂದು ನಡೆಯುವಂತೆ ಅವಕಾಶ ಮಾಡಿ ಕೊಡಬೇಕು ಮುಂದೆ ಜನರ ಪ್ರತಿಕ್ರಿಯೆ ನೋಡಿ ಅಗತ್ಯ ಬಿದ್ದರೆ ಪ್ರತಿ ವಾರ ಅಥವಾ 15 ಕೊಮ್ಮೆ ನಡೆಸಲು ವ್ಯವಸ್ಥೆ ಮಾಡಿ ಕೊಡಲು ಸಂಸ್ಥೆಯ ಆಡಳಿತ ಅಧಿಕಾರಿರವರಲ್ಲಿ ವಿನಂತಿಸುವ ಬಗ್ಗೆ ತಿಳಿಸಿದರು.ಮುಖ್ಯವಾಗಿ ಸಣ್ಣ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಮತ್ತು ವೃದ್ಧರಿಗೆ ಹಲವು ಸಮಯದಿಂದ ಜೌಷಧ ಮಾಡಿ ನಿಲ್ಲದವರಿಗೆ ಹೊಮಿಯೋಪಥಿ ಜೌಷಧ ಉಪಯೋಗ ವಾಗುದೆಂದು ತಿಳಿಸಿದರು. ಪ್ರಾರಂಭದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಶಿಬಿರದಲ್ಲಿ ಸುಮಂಗಲ ರವರು ಸ್ವಾಗತಿಸಿ ವಿನೋದರವರು ಕಾರ್ಯಕ್ರಮ ನಡೆಸಿ ಕೊಟ್ಟರು.
