ಕೈಕಂಬ: ನೇತ್ರಾವತಿ ನದಿ ಉಳಿಸಿ ಅಭಿಯಾನದ ಅಂಗವಾಗಿ ದ.ಕ.ಪ ಒಕ್ಕೂಟ ಮತ್ತು ಮ.ನ.ಪ ಒಕ್ಕೂಟದ ಜಂಟಿ ಆಶ್ರಯದಲ್ಲಿ ನೇತ್ರಾವತಿ ಉಳಿಸಿ ಅಭಿಯಾನ ನಡಿಗೆ ವಸತಿ ಸಮುಚ್ಚಯಗಳ ಬೃಹತ್ ಕಟ್ಟಡಗಳ ಕಡೆಗೆ, ಜನಜಾಗೃತಿ ಕಾರ್ಯಕ್ರಮದ ಪ್ರಮುಖ ಅಂಗವಾದ ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹಾಗೂ ನೇತ್ರಾವತಿ ನದಿಗೆ ಆಗುತ್ತಿರುವ ಅಪಾಯಗಳ ಬಗ್ಗೆ ಪರಿಸರಾಸಕ್ತ ತಜ್ಞರು ನೀಡಿದ ಮಾಹಿತಿಯನ್ನು ಒಳಗೊಂಡ ಒಂದು ಕರಪತ್ರವನ್ನು ತಯಾರಿಸಿ ನಗರದ ಹೆಚ್ಚಿನ ವಸತಿ ಸಮುಚ್ಚಯಗಳ ಬೃಹತ್ ಕಟ್ಟಡಗಳಿಗೆ ಒಕ್ಕೂಟದ ಸದಸ್ಯರು ಭೇಟಿಯಾಗಿ ಕರಪತ್ರ ನೀಡಿ ಸಮಸ್ಯೆಯ ತೀವ್ರತೆ ಮನಗೊಂಡು, ಅವರು ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಎತ್ತಿನಹೊಳೆ ಯೋಜನೆ ತಕ್ಷಣ ನಿಲ್ಲಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯವರಿಗೆ ಶಾಶ್ವತ ನೀರಿನ ಯೋಜನೆಯನ್ನು ಮಾಡಲು ಪತ್ರ ಬರೆಯಲು ಒತ್ತಾಯಿಸುವ ಪ್ರಯತ್ನವಾಗಿದೆ.
IMG_1160

IMG_1163

IMG_1165ಈ ಜನಜಾಗೃತಿ ನಡಿಗೆಯ ಮಾಹಿತಿ ಕರಪತ್ರವನ್ನು ದ.ಕ ಜಿಲ್ಲೆಯ ಪರಿಸರಾಸಕ್ತ ಜಾಗೃತಿ, ಸಂಘಟನೆ ಹಾಗೂ ಚಳುವಳಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ಸೆಲಿನ್ ಆರ್ಹಾನ್ಹ ರವರು ಅಧಿಕೃತವಾಗಿ ಅ.13ರಂದು ಮಂಗಳವಾರ ಬೆಂದೂರ್ ವೆಲ್ ನಲ್ಲಿ ಬಿಡುಗಡೆ ಗೊಳಿಸಿದರು , ಈ ಕರಪತ್ರಗಳನ್ನು ಮ.ನ.ಪ ಒಕ್ಕೂಟದ ಅಧ್ಯಕ್ಷರಾದ ವಂದನೀಯ ವಾಡ್ಸನ್ ರವರಿಗೆ ಹಸ್ತಾಂತರಿಸಿ ಈ ಚಳುವಳಿಯನ್ನು ಮುಂದುವರಿಸಲು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಎಲ್ಲಾ ಪಧಾಧಿಕಾರಿಗಳು ಹಾಜರಿದ್ದರು. ಈ ಸಂರ್ಧರ್ಭದಲ್ಲಿ ಅವರು ಮಾತನಾಡಿ ನೇತ್ರಾವತಿ ನದಿ ನಮ್ಮ ಜಿಲ್ಲೆಯ ಜೀವನಾಡಿ ಇದನ್ನು ಉಳಿಸುವ ಅಭಿಯಾಣದಲ್ಲಿ ನಮ್ಮ ಜಿಲ್ಲೆಯ ಪ್ರತಿಯೋಬ್ಬರು ಸ್ಪಂದಿಸುವ ಅಗತ್ಯ ಒತ್ತಿ ಹೇಳಿದರು.

By suddi9

Leave a Reply

Your email address will not be published. Required fields are marked *