ಮೂಡುಬಿದಿರೆ: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಬಿರಾವಿನ ಪ್ರಶಾಂತ್ ಪೂಜಾರಿ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಬುಧವಾರ ರಾತ್ರಿ ಭೇಟಿದರು.
15 mood prahalad joshi
ಹೆತ್ತವರಿಗೆ ಸಾಂತ್ವನ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣವಾಗಿ ವಾರವಾಗುತ್ತಿದ್ದರೂ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದ ಮತ್ತು ಸಚಿವ, ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಅವರು ಮೃತರ ಮನೆಗೆ ಭೇಟಿ ನೀಡದಿರುವುದು, ಅವರೊಳಗೆ ಮಾನವೀಯತೆ ಅಂಶವಿದೆಯೇ ಎನ್ನುವುದನ್ನು ಸಂಶಯದಿಂದ ನೋಡುವಂತದಾಗಿದೆ . ಅಲ್ಲದೆ ಪೊಲೀಸ್ ಮೇಲಾಧಿಕಾರಿಗಳು ಕೂಡಾ ಸರಿಯಾಗಿ ತನಿಖೆ ನಡೆಸದೆ ಸರ್ಕಾರದ ನಿರ್ದೇಶನದಂತೆ ಪಕ್ಷಪಾತ ಧೋರಣೆ ಮಾಡುತ್ತಿರುವ ರೀತಿ ನನ್ನನ್ನು ಚಕಿತಗೊಳಿಸಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಬಿಜೆಪಿ ಮುಖಂಡರಾದ
ಕೆ.ಪಿ ಜಗದೀಶ್ ಅಧಿಕಾರಿ, ಉಮಾನಾಥ್ ಕೋಟ್ಯಾನ್, ಪದ್ಮನಾಭ ಕೊಠಾರಿ, ಕೆ.ಆರ್ ಪಂಡಿತ್, ಸುದರ್ಶನ್ ಎಂ.,ನಾಗರಾಜ ಪೂಜಾರಿ, ಪ್ರಸಾದ್, ರಂಜಿತ್ ಪೂಜಾರಿ, ಸೋಮನಾಥ್ ಕೋಟ್ಯಾನ್ ಮೊದಲಾದವರಿದ್ದರು.

By Suddi9

Leave a Reply

Your email address will not be published. Required fields are marked *