ಮೂಡುಬಿದರೆ:ಬಜರಂಗದಳ ಮುಖಂಡ ಸೋಮನಾಥ ಕೋಟ್ಯಾನ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

mbd_oct11_10( somanth Kotian)
ಶನಿವಾರ ರಾತ್ರಿ ಸುಮಾರು 9.20ಕ್ಕೆ 007122833 ಸಂಖ್ಯೆಯ ಇಂಟರ್ನೆಟ್ ಕರೆ ಬಂದಾಗ ಸೋಮನಾಥ್ ಕೋಟ್ಯಾನ್ ಸ್ವೀಕರಿಸಲಿಲ್ಲ ಎನ್ನಲಾಗಿದೆ. 9.22ಕ್ಕೆ ಅದೇ ಸಮಖ್ಯೆಯಿಂದ ಎರಡನೇ ಕರೆ ಬಂದಾಗ ಸೋಮನಾಥ್ ಕರೆ ಸ್ವೀಕರಿಸಿದರು. ಆವಾಗ ಕರೆ ಮಾಡಿದ ವ್ಯಕ್ತಿ, ಅಶ್ಲೀಲ ಪದಗಳನ್ನು ಬಳಸಿ ತುಳುವಿನಲ್ಲಿ ಬೆದರಿಕೆ ಹಾಕಿದನೆನ್ನಲಾಗಿದೆ. ಆರೋಪಿ ಮಾತು ಮುಂದುವರಿಸಿದಾಗ ಸೋಮನಾಥ್ ಪ್ರತಿಕ್ರಿಯಿಸದೆ ಮೊಬೈಲನ್ನು ಮೇಜಿನ ಮೇಲಿಟ್ಟ ಸ್ವಲ್ಪ ಹೊತ್ತಿನಲ್ಲಿ ಕರೆ ಕಡಿತವಾಯಿತ್ತೆನ್ನಲಾಗಿದೆ. ಈ ಬಗ್ಗೆ ಮೂಡುಬಿದರೆ ಪೊಲೀಸರಿಗೆ ದೂರು ನೀಡಲಾಗಿದೆ.

By suddi9

Leave a Reply

Your email address will not be published. Required fields are marked *