ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ರಸ್ತೆ ಕಾಂಕ್ರ್ಟೀಕರಣ ಹಾಗೂ ದೇವಳದ ರಥಬೀದಿಗೆ ಇಂಟರಲಾಕ್ ಕಾಮಗಾರಿಗಳನ್ನು ಜಿಲ್ಲಾ ಉಸ್ತುವರಿ ಸಚಿವ ಬಿ ರಮಾನಾಥರೈ ಅವರು ಭಾನುವಾರ ವೀಕ್ಷಿಸಿದರು.
ಇದೇ ಸಂದರ್ಭ ಸಚಿವ ರಮಾನಾಥ ರೈ ಅವರು ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ದೇವಳದ ವತಿಯಿಂದ ಸಚಿವರನ್ನು ಪ್ರಸಾದ ನೀಡಿ ಗೌರವಿಸಲಾಯಿತು.ಪೊಳಲಿ ದೇವಳದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ ಉಪಸ್ಥಿತರಿದ್ದರು.
ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಪ್ರಯತ್ನ ಮುಂದುವರಿಸುತ್ತೇನೆ. ಈಗಾಗಲೇ ಹಲವು ಕಾಮಗಾರಿಗಳು ನಡೆದಿದೆ. ಕ್ಷೇತ್ರದ ಮೂಲ ಸೌಖರ್ಯದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ರಸ್ತೆಯಿಂದ ದೇವಳದವರೇಗೆ ನಾಬರ್ಡ್ಡ್ ಆರ್ ಐ ಡಿ ಎಫ್ 19(ಪ್ರವಾಸೋದ್ಯಮ) ಯೋಜನೆಯಡಿಯಲ್ಲಿ ಮಂಜೂರಾದ ಮೊತ್ತ 132.00 ಲಕ್ಷ. ಮೊತ್ತವನ್ನು ಬಿಡುಗಡೆಗೊಳಿಸಿ ದೇವಳಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕೆ ರಸ್ತಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗದ್ದು ಕಾಮಗಾರಿ ಪೂರ್ತಿ ನಡೆದಿದೆ. ದೇವಳದ ಸುತ್ತುವರಿ ರಥಬೀದಿಯ ನವೀಕರಣಕ್ಕಾಗಿ ಇಂಟರ್ಲಾಕ್ ಅಳವಡಿಕೆಯ ಕಾಮಗಾರಿಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಎ ಡಬ್ಲ್ಯೊ ಉಮೇಶ್ ಭಟ್, ಜೆ.ಇ. ಅರುಣು ಪ್ರಕಾಶ್, ಕರಿಯಂಗಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ವೀಣಾ ಉಪೇಂದ್ರ ಆಚಾರ್ಯ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಉಪಾದ್ಯಕ್ಷ ಯೋಗಿಶ್ ಪೂಜಾರಿ ಸೂರ್ಲ ಪಂಚಾಯತ್ ಸದಸ್ಯರಾದ ವಸಂತ ಅಮೀನ್ . ಅಬ್ದುಲ್ ರಝಾಕ್ , ಸ್ಥಳೀಯರಾದ ಚಂದ್ರಹಾಶ ಪಲ್ಲಿಪಾಡಿ, ಸದಾನಂದ ಪೊಳಲಿ, ರಾಜೇಶ್ ಹೆಗ್ಡೆ, ಚಂದ್ರಶೇಖರ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.





