ಸುದ್ದಿ9 ಮೂಡುಶೆಡ್ಡೆ : ಸ್ವ ಸಹಾಯ ಸಂಘಗಳು ಸ್ವಾವಲಂಬನೆಯಾಗಿ ಕಾರ್ಯನಿರ್ವಹಿಸುವಂತಾಗಬೇಕು. ಸ್ವ ಸಹಾಯ ಸಂಘಗಳು ಹಣಕಾಸಿನ ವ್ಯವಹಾರವನ್ನು ನಡಸುವುದು ಮಾತ್ರವಲ್ಲದೇ ಪ್ರಸ್ತುತ ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಸರಕಾರದಿಂದ ದೊರೆಯುವ ಸೌಲಭ್ಯಗಳ ಜಾಗೃತಿಯನ್ನು ಮೂಡಿಸಿ ಸಿಗುವಂತೆ ಮಾಡಬೇಕು ಎಂದು ದಿಶಾ ಸಂಸ್ಥೆಯ ನಿರ್ಧೇಶಕರಾದ ಸಿಲ್ವೆಸ್ಟರ್ ಡಿ ಸೋಜ ಹೇಳಿದರು. ಅವರು ಮೂಡುಶೆಡ್ಡೆ ಯೋಜನಾ ಸೇವಾ ಸಂಘದಲ್ಲಿ ನಡೆದ ಸ್ವ ಸಹಾಯ ಸಂಘಗಳಿಗೆ ದಾಖಲಾತಿ ನಿರ್ವಹಣೆ ತರಬೇತಿ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.


ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕ ರುದೇಶ್ ತರಬೇತಿಯನ್ನು ನೀಡಿದರು. ವಿವಿಧ ಸ್ವ ಸಹಾಯ ಸಂಘಗಳ ಮುಖಂಡರುಗಳಾದ ಶ್ರೀಧರ ಆಚಾರ್ಯ ಶಾಲೆಪದವು, ಕಿಶೋರ್ ಭಂಡಾರಿ, ಶೀನ ಶೆಟ್ಟಿ ಎಲಂಗೂರು, ಶ್ರೀಮತಿ ಹರಿಣಾಕ್ಷಿ ಆರಂತೋಟ ಉಪಸ್ಥಿತರಿದ್ದರು. ತರಬೇತಿಯನ್ನು ಶಾರದ ಬೊಟ್ಟಿಕೆರೆ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಪ್ರವೀಣ್ ಆಳ್ವ ಮೇಗಿನ ಮನೆ ಸ್ವಾಗತಿಸಿ ಆಪ್ಸತ್ ಎದುರುಪದವು ವಂದಿಸಿದರು. ತರಬೇತಿ ಶಿಬಿರದಲ್ಲಿ ದಿಶಾ ಟ್ರಸ್ಟ್ ಪ್ರವರ್ತಿತ ಮೂಡುಶೆಡ್ಡೆ ಗ್ರಾಮದ ವಿಷ್ಣುಮೂರ್ತಿ ಬೋರುಗುಡ್ಡೆ, ಫಲ್ಗುಣಿ ಮೇಗಿನಮನೆ, ಕಟಿಲೇಶ್ವರೀ ಬೊಟ್ಟಿಕೆರೆ, ಶ್ರೀ ಮಂಜುನಾಥ ಎಲಂಗೂರು, ಶ್ರೀಲಕ್ಷ್ಮಿ ಎದುರುಪದವು ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ತರಭೇತಿಯ ಪ್ರಯೋಜನ ಪಡೆದುಕೊಂಡರು.
