ಮೂಡುಬಿದರೆ : ಲಯನ್ಸ್ ಕ್ಲಬ್ ಆಲಂಗಾರು ಇದರ ಆಶ್ರಯದಲ್ಲಿ ಮೂಡುಬಿದರೆ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ಭಾನುವಾರ ನಡೆದ ವಿಶಿಷ್ಟ ಚೇತನರಿಗೆ ತಪಾಸಣಾ ಶಿಬಿರ ಮತ್ತು ಸರ್ಕಾರದ ಗುರುತು ಚೀಟಿ ವಿತರಣಾ ಕಾರ್ಯಕ್ರಮದಲ್ಲಿ 178 ಜನರನ್ನು ತಪಾಸಣೆಗೆ ಒಳಪಡಿಸಿದ್ದು ಅದರಲ್ಲಿ 76 ಜನರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿದೆ.
ಲಯನ್ಸ್ ಜಿಲ್ಲೆ 317ಡಿ ಇದರ ಲಯನ್ ಜಿಲ್ಲಾ ಗವರ್ನರ್ ಎಂ.ಕವಿತಾ ಎಸ್.ಶಾಸ್ತ್ರಿ ಉದ್ಘಾಟಿಸಿದರು.ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಆಲಂಗಾರು ಚರ್ಚಿನ ರೆ.ಫಾ ಧರ್ಮಗುರು ಬಾಸಿಲ್ ವಾಸ್ ಆಶೀರ್ವಚನ ನೀಡಿದರು. ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಆಲಂಗಾರು ಮೌಂಟ್ ರೋಸರಿ ಆಸ್ಪತ್ರೆಯ ನಿದೇರ್ಶಕ ಪ್ರೆಸಿಲ್ಲಾ ಡಿ’ಮೆಲ್ಲೋ, ರೋಟರಿ ಕ್ಲಬ್‍ನ ಅಧ್ಯಕ್ಷ, ಪುರಸಭಾ ಸದಸ್ಯ ಪಿ.ಕೆ ಥೋಮಸ್, ದ.ಕ ಅಂಗವಿಕಲರ ಸಂಘದ ಅಧ್ಯಕ್ಷ ಡಾ.ಮುರಳೀಧರನ್ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ.ನವೀನ್ ಕುಲಾಲ್, ಸೌತ್ ಕೆನರಾ ಪೋಟೋಗ್ರಾಫರ್ಸ್ ಎಸೋಶಿಯೇಶನ್‍ನ ಅಧ್ಯಕ್ಷ ಸಂತೋಷ್ ಅತಿಥಿಗಳಾಗಿದ್ದರು.
ಆಲಂಗಾರು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಹರ್ಮಾನ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು ಮನೋಹರ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕಾರ್ಯದರ್ಶಿ ಸೆಲ್ವೀನ್ ಜೂಡ್ ಕುಲಾಸೋ ವಂದಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ಗ್ರಾಮಾಂತರ, ತಾಲೂಕು ಆರೋಗ್ಯಧಿಕಾರಿ, ಮೂಡುಬಿದರೆ ಸಮುದಾಯ ಆರೋಗ್ಯ ಕೇಂದ್ರ, ಮೌಂಟ್ ರೋಸರಿ ಆಸ್ಪತ್ರೆ ಆಲಂಗಾರು, ದ.ಕ ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
