ಬಂಟ್ವಾಳ: ನಾವು ದುಡಿದು ತಿನ್ನುವವರು, ನಮಗೆ ಈ ಸೂರೇ ಜೀವನದ ಕೊಂಡಿ, ಇದನ್ನು ಸರಕಾರ ಕಿತ್ತುಕೊಂಡರೆ ಉಳಿದರುವುದು ಸಾವು ಮಾತ್ರ. ಅಭಿವೃದಿಯ ಹೆಸರಿನಲ್ಲಿ ಕೂಲಿ ಮಾಡಿ ಬದುಕುವ ಬಡವರ ಜಮೀನು ಬೇಕಾ ನಿಮಗೆ . ರಸ್ತೆಯ ಹೆಸರಿನಲ್ಲಿ ನಮ್ಮನ್ನು ಬೀದಿಗೆ ತಳ್ಳುತ್ತೀರಾ. ಒಂದು ವೇಳೆ ನಾವೂ ಮನೆ ಮಠ ಕಳೆದುಕೊಳ್ಳುವ ಪರಿಸ್ಥಿತಿ ಎದುರಾದರೆ ನಾವೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಹೀಗೆಂದು ಸರಕಾರಕ್ಕೆ ಎಚ್ಚರಿಕೆಯ ಮಾತುಗಳನ್ನು ಆಡಿದ್ದು ಕಲ್ಲಡ್ಕ ಸಮೀಪದ ನರಹರಿಯ ಜನತೆ.

ಹಾಸನ-ಬಿ.ಸಿ.ರೋಡು ಚತುಷ್ಪಥ ರಸ್ತೆಯಾಗುವ ಭರದಲ್ಲಿ ಕಲ್ಲಡ್ಕ ಪೇಟೆಗೆ ಬಂದಿರುವ ಆತಂಕ ಇನ್ನೂ ದೂರವಾಗಿಲ್ಲ, ಹಾಗಿದ್ದೂ ಕಲ್ಲಡ್ಕ ಪೇಟೆಯನ್ನು ಉಳಿಸುವ ಭರದಲ್ಲಿ ಬೈಪಾಸ್ ಬೇಕು, ಮೇಲ್ಸೇತುವೆ ಸಾಕು, ಬೈಪಾಸ್ ಬೇಡ, ಅಗಲೀಕರಣ ಒಳ್ಳೆಯದು ಎಂಬೆಲ್ಲಾ ಬೇಕು-ಬೇಡಗಳ ನಡುವೆ ಹೆದ್ದಾರಿ ಇಲಾಖೆ “ಅಂಡರ್ ಪಾಸ್” ಅನ್ನೇ ಖಾಯಂ ಮಾಡಲು ಹೊರಟಿದೆ ಮಾತ್ರವಲ್ಲದೆ ಬೋಳಂಗಡಿಯಲ್ಲಿ ಟೋಲ್ ಫ್ಲಾಝಾ ನಿರ್ಮಿಸುವ ಬೃಹತ್ ಯೋಜನೆ ಹಾಕಿಕೊಂಡಿದ್ದು, ಎಕ್ರೆ ಗಟ್ಟಲೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ಮೂಲಕ ಜನತೆಗೆ ಶಾಕ್ ನ ಮೇಲೆ ಶಾಕ್ ನೀಡಿದೆ.
ಹೆದ್ದಾರಿಯನ್ನು ಚತುಷ್ಪಥವನ್ನಾಗಿಸುವ ಜೊತೆಗೆ ಕಲ್ಲಡ್ಕ ಹಾಗೂ ಪಾಣೆಮಂಗಳೂರು ಗ್ರಾಮದ ನಡುವೆ ಟೋಲ್ ಫ್ಲಾಝಾ ನಿರ್ಮಿಸಲು ಮುಂದಾಗಿರುವ ಹೆದ್ದಾರಿ ಇಲಾಖೆ ಎಕ್ರೆಗಟ್ಟಲೆ ಜಮೀನು ಭೂಸ್ವಾಧೀನಕ್ಕೆ ಈ ಬಗ್ಗೆ ಗುರುವಾರ ಅಧಿಸೂಚನೆ ಹೊರಡಿಸಿದೆ. ಹಾಗಾಗಿ ನೂರಾರು ಮಂದಿ ಮನೆಯನ್ನು ಕಳೆದುಕೊಳ್ಳಲ್ಲಿದ್ದು ಮುಂದೇನು ಎನ್ನುವ ಆಲೋಚನೆಯಲ್ಲಿ ನಿದ್ದೆಯಿಲ್ಲದೆ ಕುಳಿತಿದ್ದಾರೆ.
ವರ್ಷದ ಹಿಂದೆ ಹೆದ್ದಾರಿ ಇಲಾಖೆ ಸರ್ವೆ ನಡೆಸಿ ಭೂಸ್ವಾಧೀನದ ನಕ್ಷೆ ತಯಾರಿಸಿತ್ತು. ಕಲ್ಲಡ್ಕ ಪೇಟೆಯೇ ಈ ಚತುಷ್ಪಥಕ್ಕೆ ಬಲಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಲ್ಲಡ್ಕದಲ್ಲಿ ಹೋರಾಟ ಸಮಿತಿ ರಚನೆಯಾಗಿ, ಬೈಪಾಸ್ ನಿರ್ಮಾಣಕ್ಕೆ ಒತ್ತಾಯ ಕೇಳಿಬಂದಿತ್ತು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ಬೆಂಬಲ ಸೂಚಿಸಿದರಲ್ಲದೆ ಬೈಪಾಸ್ ನಿರ್ಮಾಣ ಕುರಿತಂತೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ನಂತರದ ಬೆಳವಣಿಗೆಯಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆ ಸರ್ವೆ ಕಾರ್ಯ ನಡೆಸಿತ್ತು. ಈ ಸಮೀಕ್ಷೆಯಂತೆ ಸಾಗುವ ಬೈಪಾಸ್ ರಸ್ತೆಯ ನಕ್ಷೆಯಂತೆ ಬಾಳ್ತಿಲ ಗ್ರಾಮದ ಹಲವು ಮನೆಗಳಿಗೆ ತೊಂದರೆ ಎದಿರಾಗುವ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿತಲ್ಲದೆ, ಬೈಪಾಸ್ ನಿರ್ಮಾಣ ಬೇಡವೇ ಬೇಡ ಎಂದು ಪ್ರತಿಪಾದಿಸಿತ್ತು. ಸಂತ್ರಸ್ತರ ಅಹವಾಲು ಸ್ವೀಕಾರ ಸಭೆಯಲ್ಲೂ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೇಲ್ಸೇತುವೆಯೊಂದೇ ಪರಿಹಾರ ಎಂದು ಸಲಹೆ ನೀಡಿತ್ತು. ಗ್ರಾಮಸ್ಥರ ಮನವಿ ಸ್ವೀಕರಿಸಿದ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿ ತೆರಳಿದ್ದರು.
ಈ ಎಲ್ಲಾ ಘಟನೆಗಳ ಬಳಿಕ ಇದೀಗ ಅಧಿಸೂಚನೆ ಹೊರಡಿಸಿರುವ ಹೆದ್ದಾರಿ ಇಲಾಖೆ ಗೋಳ್ತಮಜಲು, ಪಾಣೆಮಂಗಳೂರು ಹಾಗೂ ನರಿಕೊಂಬು ಗ್ರಾಮಗಳ ವಿವಿಧ ಸ.ನಂಬ್ರಗಳ ಒಟ್ಟು ಸುಮಾರು 48 ಹೆಕ್ಟೇರ್ ಜಮೀನು ಒತ್ತುವರಿಗೆ ಅಧಿಸೂಚನೆ ಹೊರಡಿಸಿದೆ. ಬೋಳಂಗಡಿ ಎಂಬಲ್ಲಿನ ತಿರುವೊಂದರಲ್ಲಿ ಟೋಲ್ ಫ್ಲಾಝಾ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದೆ, ಸ್ಥಳೀಯರ ಪ್ರಕಾರ ಈ ಹಿಂದೆ ನಿಗದಿ ಪಡಿಸಿದ ಜಮೀನಿಗಿಂತ ಹೆಚ್ಚುವರಿಯಾಗಿ ಜಮೀನು ಒತ್ತುವರಿ ಮಾಡಿಕೊಳ್ಳಲು ಹೆದ್ದಾರಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಗೋಳ್ತಮಜಲು ಗ್ರಾಮದ ಸ.ನಂ. 1-1 ರಲ್ಲಿ ಈ ಹಿಂದೆ 90 ಚಮೀ ಭೂಸ್ವಾಧೀನಕ್ಕೆ ಗುರುತು ಹಾಕಿದ್ದರೆ, ಈಗ 324 ಕ್ಕೆ ಏರಿದೆ, ಸ.ನಂ. 2-1 ರಲ್ಲಿ ಈ ಹಿಂದೆ ಗುರುತು ಹಾಕಿರಲಿಲ್ಲ ಆದರೆ ಈಗ 607 ಚಮೀ ಒತ್ತುವರಿಯಾಗಲಿದೆ ಹೀಗೆ ಹಲವು ನಿವಾಸಿಗಳಿಗೆ ಈಗಿನ ಹೊಸ ಅಧಿಸೂಚನೆಯಲ್ಲಿ ಹೆದ್ದಾರಿ ಇಲಾಖೆ ಶಾಖ್ ನೀಡಿದೆ. ಟೋಲ್ ಫ್ಲಾಝಾ ನಿಮರ್ಾಣಕ್ಕೆ ಹೆಚ್ಚುವರಿ ಜಮೀನು ಅಗತ್ಯವಿರುವುದರಿಂದ ಈ ಮಾಪರ್ಾಡು ಮಾಡಲಾಗಿದೆ ಎನ್ನುವುದು ಅಧಿಕಾರಿಗಳು ನೀಡುವ ಮಾಹಿತಿ.
ಇಲಾಖಾ ಅಧಿಕಾರಿಗಳು ನೀಡುವ ಮಾಹಿತಿಯಂತೆ ಹೆದ್ದಾರಿಯ ಇಕ್ಕೆಲಗಳಲ್ಲಿ 22.5ಮೀಟರ್ (ಒಟ್ಟು 45ಮೀ.) ಸ್ವಾಧೀನಪಡಿಸುವ ಬಗ್ಗೆ ಈಗಾಗಲೇ ಗುರುತು ಹಾಕಲಾಗಿದ್ದು, ಈ ಸ್ಥಳದಲ್ಲಿಯೇ ಹೆದ್ದಾರಿ ಇಲಾಖೆಯ ಚತುಷ್ಪಥ ರಸ್ತೆ ನಿರ್ಮಾಣಗೊಳ್ಳಲಿದೆ.
ಟೋಲ್ ಫ್ಲ್ಲಾಝಾ ನಿರ್ಮಾಣದ ಜಮೀನಿನ ಅಕ್ಕಪಕ್ಕದಲ್ಲಿ 130 ಮೀ, 90 ಮೀ ನಷ್ಟು ಜಮೀನು ಒತ್ತುವರಿಗೆ ಗುರುತುಹಾಕಲಾಗಿದೆ. ಅಡ್ಡಹೊಳೆಯಿಂದ – ಬಿ.ಸಿ.ರೋಡು ವರೆಗಿನ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಕಲ್ಲಡ್ಕ-ಪಾಣೆಮಂಗಳೂರು ನಡುವೆ ಟೋಲ್ ಫ್ಲಾಝಾ ನಿರ್ಮಿ ಸಲಾಗುವುದು, ಅಡ್ಡಹೊಳೆಯಿಂದ-ಹಾಸನದವರೆಗಿನ ಚತುಷ್ಪಥ ರಸ್ತೆಗೆ ಆಲೂರು ಎಂಬಲ್ಲಿ ಟೋಲ್ ಫ್ಲಾಝಾ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆ ರೂಪುರೇಷೆ ರೂಪಿಸಿದೆ.
..
ಹೆದ್ದಾರಿ ಇಲಾಖೆ ಗುರುವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಹಿಂದೆ ಗುರುತು ಹಾಕಿರುವುದಕ್ಕಿಂತಲೂ ಹೆಚ್ಚಿನ ಕೃಷಿಭೂಮಿ ಮನೆಗಳು ಹೆದ್ದಾರಿ ಪಾಲಾಗುವ ಸೂಚನೆ ಇದೆ. ಇದಕ್ಕೆ ಅವಕಾಶ ಕೊಡುವುದಿಲ್ಲ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಬೈಪಾಸ್ ನಿರ್ಮಾ ಣಕ್ಕೆ ಒತ್ತಾಯಿಸಿ ಸಂಘಟಿತ ಹೋರಾಟ ನಡೆಸುತ್ತೇವೆ.
.ರಾಕ್ಲೈನ್ ಸುಂದರ್
ನರಹರಿ ನಗರ ಕಲ್ಲಡ




