ಮೂಡುಬಿದರೆ: ಇಸ್ರೇಲ್ನಲ್ಲಿ ಸಮುದ್ರ ತೀರದಲ್ಲಿ ಫೊಟೋ ತೆಗೆಸಿಕೊಳ್ಳುವ ವೇಳೆ ದೊಡ್ಡ ಗಾತ್ರದ ತೆರೆ ಅಪ್ಪಳಿಸಿ ಮೂಡುಬಿದರೆ ಮೂಲದ ಯಶೋಧರ ಆಚಾರ್ಯ (48) ಮೃತಪಟ್ಟಿದ್ದಾರೆ.
ಯಶೋಧರ ಆಚಾರ್ಯ

ಯಶೋಧರ ಆಚಾರ್ಯ ಅವರು ತನ್ನ ಸಹೋದರ ರತ್ನಾಕರ ಆಚಾರ್ಯ ಹಾಗೂ ಇತರರೊಂದಿಗೆ ಸೆ.23ರಂದು ರಜೆಯ ನಿಮಿತ್ತ ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಫೊಟೋ ತೆಗೆಯುತ್ತಿದ್ದಾಗ ದೊಡ್ಡ ಗಾತ್ರದ ತೆರೆ ಅಪ್ಪಳಿಸಿದ್ದು ಯಶೋಧರ ಆಚಾರ್ಯ ಹಾಗೂ ಇಸ್ರೇಲ್ ಪ್ರಜೆಯೊಬ್ಬರನ್ನು ತೆರೆ ಸೆಳೆದೊಯ್ದಿತ್ತು. ಅಲ್ಲಿನ ಕೋಸ್ಟ್ ಗಾರ್ಡ್ ತಕ್ಷಣವೇ ಇಬ್ಬರನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದು ಯಶೋಧರ ಆಚಾರ್ಯ ಮೃತಪಟ್ಟಿದ್ದರು. ಇಸ್ರೆಲ್ ಪ್ರಜೆ ಬದುಕುಳಿದಿದ್ದಾರೆ. ಯಶೋಧರ ಆಚಾರ್ಯ ಅವರು ಮೂಡುಬಿದರೆ ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷರಾಗಿ ಮೂಡುಬಿದರೆಯಲ್ಲಿ ನವರತ್ನ ಡೈವರ್ಕ್ಸ್ ನಡೆಸುತ್ತಿದ್ದು ನಾಲ್ಕು ತಿಂಗಳ ಹಿಂದೆಯಷ್ಟೇ ಇಸ್ರೇಲ್ಗೆ ತೆರಳಿದ್ದರು. ಅವರಿಗೆ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಯಶೋಧರ ಆಚಾರ್ಯ ಅವರ ಮೃತದೇಹವನ್ನು ಭಾನುವಾರ ಕಲ್ಲಬೆಟ್ಟುವಿನಲ್ಲಿರುವ ಮನೆಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು.
