ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಬಡಗೆಡಪದವು ಮಿಜಾರ್ಹಾಗೂ ನಮ್ಮ ಟಿವಿಯ ಸಹಯೋಗದೊಂದಿಗೆ ಭೂತನಾಥೇಶ್ವರ ದೇವಳದ ಆವರಣದಲ್ಲಿ ಬಲೇತೆಲಿಪಾಲೆ ತುಳು ರಿಯಾಲಿಟಿ ಷೋ ಹಾಸ್ಯ ಸರಣಿ ಸ್ಪರ್ಧೆಯ ಸೀಸನ್ 3ರ ಪೈನಲ್ ಭಾನುವಾರ ಕಿಕ್ಕಿರಿದ ಜನಸಂದಣಿಯೊಂದಿಗೆ ಸಂಪನ್ನಗೊಂಡಿತು.

ಪ್ರಥಮ ಸ್ಥಾನವನ್ನು ಈ ಬಾರಿಯು ಕಾಪು ಪ್ರಸಂಶ ತಂಡ ಗಳಿಸಿದೆ. ದ್ವಿತೀಯ ಸ್ಥಾನವನ್ನು ಸಮರ ಸಾರಥಿಯ ಮಂಜುರೈ ತಂಡ ಬಾಚಿಕೊಂಡಿದೆ ತ್ರತೀಯ ಸ್ಥಾನವನ್ನು ಉಮೇಶ್ ಚೋಟ್ ಮಿತ್ರ ತಂಡ ಗಳಿಸಿದೆ.
ಸಂಗೀತ ನಿರ್ದೇಶಕ ಗುರುಕಿರಣ್ ತುಳು ಹಾಗೂ ಬೋಝ್ ಪುರಿ ಚಿತ್ರರಂಗದ ನಟಿ ಪಾಖಿಹೆಗ್ಡೆ, ವಿಜಯನಾಥವಿಠಲಶೆಟ್ಟಿ ,ಡಾ.ಶಿವಚರಣ್ ಶೆಟ್ಟಿ ಅವರುಗಳು ತೀರ್ಪು ಗಾರರಾಗಿದ್ದರು. ಕೇಮಾರ್ ಶ್ರೀ ಈಶ ವಿಠಲದಾಸ್ ಸ್ವಾಮೀಜಿ, ಡಾ,ಮೋಹನ್ ಆಳ್ವ, ನಾಗರಾಜ ಶೆಟ್ಟಿ, ಉಮಾನಾಥಕೊಟ್ಯಾನ್,ಜೈತುಳುನಾಡ್ ತುಳು ಚತ್ರದ ನಾಯಕ ಅವಿನಾಶ್ ಶೆಟ್ಟಿ ,ಸುರೇಶ್ ಶೆಟ್ಟಿ, ರೂಪೇಶ್ ಶೆಟ್ಟಿ,ಪ್ರತ್ವಿರಾಜ್ ಶೆಟ್ಟಿ , ರಾಜೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.



