ಮೂಡುಬಿದರೆ: ಮುಂದಿನ ಜನಾಂಗದ ಭವಿಷ್ಯವನ್ನು ಒತ್ತೆಯಿಟ್ಟು, ಪರಿಸರಕ್ಕೆ ವಿನಾಶ ತಂದುಕೊಂಡು ನಾವು ಸಾಧಿಸುತ್ತಿರುವ ಅಭಿವೃದ್ಧಿ ಮಾನವ ಜನಾಂಗಕ್ಕೆ ಮಾರಕ ಎಂದು ಮೂಡುಬಿದರೆ ವಲಯದ ಪ್ರಧಾನ ಧರ್ಮಗುರು ರೆ.ಫಾ ಆಸ್ಟಿನ್ ಪೀಟರ್ ಪೆರಿಸ್ ನುಡಿದರು.
ಅವರು ಭಾರತೀಯ ಕಥೊಲಿಕ್ ಯುವ ಸಂಚಲನ ಕೇಂದ್ರೀಯ ಸಮಿತಿ, ಐಸಿವೈಎಮ್ ಮೂಡುಬಿದರೆ ವಲಯ ಹಾಗೂ ಐಸಿವೈಎಮ್ ಶಿತರ್ಾಡಿ ಘಟಕದ ಜಂಟಿ ಆಶ್ರಯದಲ್ಲಿ ಶಿತರ್ಾಡಿಯ ಕಾಮರ್ೆಲ್ ಮಾತೆಯ ದೇವಾಲಯದ ವಠಾರದಲ್ಲಿ 4 ದಿನಗಳ ಕಾಲ ನಡೆದ ಮಂಗಳೂರು ಧರ್ಮಪ್ರಾಂತ್ಯದ ಯುವ ಸಮ್ಮೇಳನ ಡಿವೈಸಿ-2015ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
mbd_oct4_1
ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿಯುಸ್ ಎಲ್. ರೊಡ್ರಿಗಸ್ ಮಾತನಾಡಿ, ಹಸಿರನ್ನು ಉಳಿಸುವತ್ತ ಯುವಜನರು ಕಾರ್ಯಪ್ರವೃತ್ತರಾಗುವುದು ಇಂದಿನ ಅಗತ್ಯ. ವೈವಿಧ್ಯತೆಯಲ್ಲಿ ಏಕತೆ ಎಂಬ ಭಾವೈಕ್ಯತೆಯ ಮಂತ್ರದೊಂದಿಗೆ ಸಮಾಜದಲ್ಲಿ ಶಾಂತಿ ಸಮಾಧಾನವನ್ನು ತರುವಲ್ಲಿಯೂ ಯುವಜನರ ಪಾತ್ರ ಮಹತ್ವದ್ದು ಎಂದರು.
ಕನರ್ಾಟಕ ಪ್ರಾಂತೀಯ ಯುವಜನ ನಿಯೋಗದ ಜೊತೆ ಕಾರ್ಯದರ್ಶಿ ಸಿ.ಐರಿನ್ ತಾವ್ರೊ, ಇಂದಿನ ಆಧುನಿಕ ಸಮಾಜದಲ್ಲಿ ನಾವು ಪ್ರಕೃತಿಯ ಸಾಂಗತ್ಯದಲ್ಲಿ ಬದುಕನ್ನು ಕಟ್ಟಿಕೊಂಡರೆ ಜೀವನ ಸುಂದರವಾಗುತ್ತದೆ. ಇಂದು ಹೊಸ ಆವಿಷ್ಕಾರಗಳಿಗಿಂತಲೂ ಪರಿಸರವನ್ನು ರಕ್ಷಿಸುವಲ್ಲಿ ಹೆಚ್ಚಿನ ಪ್ರಯತ್ನವಾಗಬೇಕಿದೆ ಎಂದರು.
ಸಮ್ಮೇಳನಕ್ಕೆ ಸಹಕಾರ ನೀಡಿದ ಮೂಡುಬಿದರೆ ವಲಯ ಐಸಿವೈಎಮ್ ನಿರ್ದೇಶಕ ರೆ.ಫಾ ಬಾಜಿಲ್ ವಾಸ್, ಶಿರ್ತಾಡಿ ಚರ್ಚ್ನ ಧರ್ಮಗುರು ರೆ.ಫಾ ಫ್ರಾನ್ಸಿಸ್ ಕ್ರಾಸ್ತಾ, ಶಿರ್ತಾಡಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೊ, ಊಟೋಪಚಾರದ ಜವಾಬ್ದಾರಿಯನ್ನು ನಿರ್ವಹಿಸಿದ ಅವಿಲ್ ಡಿಸೋಜಾ ಮತ್ತು ಜೋರ್ಜ್ ಪಾಲಡ್ಕ ಅವರನ್ನು ಸನ್ಮಾನಿಸಲಾಯಿತು. ಯುವ ಸಮ್ಮೇಳನವನ್ನು ಸಂಘಟಿಸಿದ ಶಿತರ್ಾಡಿ ಐಸಿವೈಎಮ್ ಅಧ್ಯಕ್ಷ ಜೈಸನ್ ಪಿರೇರಾ, ಐಸಿವೈಎಮ್ ಮೂಡುಬಿದರೆ ವಲಯಾಧ್ಯಕ್ಷ ಅನೀಶ್ ಡಿಸೋಜಾ, ಸ್ಥಳೀಯ ಸಂಘಟಕ ಐಸಿವೈಎಮ್ ಕೇಂದ್ರಿಯ ಸಮಿತಿ ಕಾರ್ಯದರ್ಶಿ ಜ್ಯಾಕ್ಸನ್ ಎರಿಕ್ ಡಿಕೋಸ್ತಾ, ಸಮ್ಮೇಳನದ ಆತಿಥ್ಯ ವಹಿಸಿದ್ದ ಐಸಿವೈಎಮ್ ಶಿರ್ತಾಡಿ ಘಟಕ ಮತ್ತು ಮೂಡುಬಿದರೆ ವಲಯ ಸಮಿತಿಯನ್ನು ಹಾಗೂ ದಾನಿಗಳನ್ನು ಗೌರವಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಮ್ ಮತ್ತು ವೈಸಿಎಸ್ ನಿರ್ದೇಶಕ ರೆ.ಫಾ ರೊನಾಲ್ಡ್ ಪ್ರಕಾಶ್ ಡಿಸೋಜಾ, ಐಸಿವೈಎಮ್ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜಾ ಅಗ್ರಾರ್, ಮೂಡುಬಿದರೆ ವಲಯ ಐಸಿವೈಎಮ್ ಕಾರ್ಯದರ್ಶಿ ಅವಿಶ್ ಸಲ್ಡಾನ್ಹಾ, ಶಿರ್ತಾಡಿ ಘಟಕದ ಕಾರ್ಯದರ್ಶಿ ವಾಲೆಂಟಿನಾ ಕ್ಯಾಸ್ತೆಲಿನೋ ಉಪಸ್ಥಿತರಿದ್ದರು.
ಶಿರ್ತಾಡಿ ಐಸಿವೈಎಮ್ ಘಟಕದ ಅಧ್ಯಕ್ಷ ಜೈಸನ್ ಪಿರೇರಾ ಸ್ವಾಗತಿಸಿದರು. ಕೇಂದ್ರೀಯ ಆಲ್ವಿನ್ ಡಿಸೋಜಾ ಅಗ್ರಾರ್ ವಂದಿಸಿದರು. ಎಲ್ವೀರಾ ಅಲಂಗಾರು ಮತ್ತು ವಿಲ್ಸನ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಐಸಿವೈಎಮ್ ಶಿರ್ತಾಡಿ ಘಟಕದ ತಂಡ ಪ್ರಾರ್ಥನಾ ಗೀತೆ ಹಾಡಿದರು.
ಹಸಿರು ಮತ್ತು ಶಾಂತಿ ಸಮಾಧಾನದ ವಿಶ್ವದತ್ತ ಯುವಜನತೆ ಎಂಬ ಧ್ಯೇಯದೊಂದಿಗೆ 4 ದಿನಗಳ ಕಾಲ ನಡೆದ ಐಸಿವೈಎಮ್ ಯುವ ಸಮ್ಮೇಳನ ಡಿವೈಸಿ-2015 ಸಮಾವೇಶದಲ್ಲಿ 116 ಘಟಕಗಳ 450 ಪ್ರತಿನಿಧಿಗಳು ಭಾಗವಹಿಸಿ ಚಿಂತನ ಮಂಥನ ನಡೆಸಿದರು.

ಇಂದಿನ ಆಧುನಿಕ ಸಮಾಜದಲ್ಲಿ ನಾವು ಪ್ರಕೃತಿಯ ಸಾಂಗತ್ಯದಲ್ಲಿ ಬದುಕನ್ನು ಕಟ್ಟಿಕೊಂಡರೆ ಜೀವನ ಸುಂದರವಾಗುತ್ತದೆ. ಇಂದು ಹೊಸ ಆವಿಷ್ಕಾರಗಳಿಗಿಂತಲೂ ಪರಿಸರವನ್ನು ರಕ್ಷಿಸುವಲ್ಲಿ ಹೆಚ್ಚಿನ ಪ್ರಯತ್ನವಾಗಬೇಕಿದೆ.
ಸಿ.ಐರಿನ್ ತಾವ್ರೊ, ಜೊತೆ ಕಾರ್ಯದರ್ಶಿ
ಕರ್ನಾಟಕ ಪ್ರಾಂತೀಯ ಯುವಜನ ನಿಯೋಗ

By suddi9

Leave a Reply

Your email address will not be published. Required fields are marked *