ಉಡುಪಿ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮಂಗಳೂರು ತಾಲೂಕಿನ ಕೈಕಂಬದ ನಿವಾಸಿ ಪ್ರಕೃತಿ ನ್ಯಾಶನಲ್ ಸ್ಕೂಲ್ ಕಾಂತಾವರ ಇಲ್ಲಿಯ ಪ್ರಾಂಶುಪಾಲ ಗಜಾನನ ಭಟ್ಟರಿಗೆ ಅ.1ರಂದು ಗುರುವಾರ ಕಲ್ಯಾಣ ಪುರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಶೈಕ್ಷಣಿಕ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ವಿನಯ ಕುಮಾರ್ ಸೊರಕೆ ಇವರು ಶಾಲು ಹೊದಿಸಿ ಸನ್ಮಾನಿಸಿದರು.
DSC_0315

DSC_0318

ವೇದಿಕೆಯಲ್ಲಿ ಉಡುಪಿ ಜಿಲ್ಲಾ ಡಿ.ಡಿ.ಪಿ.ಐ. ದಿವಾಕರ ಶೆಟ್ಟಿ ,ಉಪನಿರ್ದೇಶಕರು ಅಭಿವೃದ್ಧಿ ಶೇಖರ್, ಅಕ್ಷರ ದಾಸೋಹ ಅಧಿಕಾರಿ ವಸಂತ ಶೆಟ್ಟಿ, ರಾಜ್ಯ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಎಮ್.ಎನ್ ಚಂದ್ರೇ ಗೌಡ , ವಾದಿರಾಜ ಕಲ್ಲೂರಾಯ , ಮಿಲಾಗ್ರಿಸ್ ಚರ್ಚ್ ನ ಧರ್ಮಗುರು ರೆಫಾ.ಸ್ಟ್ಯಾನಿ.ಬಿ. ಲೋಬೊ ,ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *