ಬಂಟ್ವಾಳ : ತಾಲೂಕು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ಆಡಳಿತ ವೈದ್ಯಾಧಿಕಾರಿ ಡಾ| ದುರ್ಗಾಪ್ರಸಾದ್ ಎಂ.ಆರ್. ಅವರಿಗೆ ವಾಮದಪದವು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ವತಿಯಿಂದ ಸಮ್ಮಾನ ಕಾರ್ಯಕ್ರಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜರಗಿತು.

0210pkt11ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ„ಕಾರಿ ಮಲ್ಲಿಕಾ, ಸಹಾಯಕ ಯೋಜನಾ„ಕಾರಿ ಅನ್ನಪೂರ್ಣ, ಅಂಗನವಾಡಿ ಮೇಲ್ವಿಚಾರಕಿ ನೀತಾ, ಬಂಟ್ವಾಳ ತಾಲೂಕು ಆರೋಗ್ಯಾ„ಕಾರಿ ಡಾ|ಮಂಜುನಾಥ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು. ವಿವಿಧ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಸಹಾಯಕಿಯರು, ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿ ವರ್ಗ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *