ಮೂಡುಬಿದರೆ: ನಮ್ಮ ಪರಿಸರವನ್ನು ಸ್ವಾರ್ಥಕ್ಕೆ ವಿನಿಯೋಗಿಸುತ್ತಿರುವುದರಿಂದ ನಮ್ಮ ಬದುಕೂ ಬರಡಾಗುತ್ತಿದೆ. ಈ ನಿಟ್ಟಿನಲ್ಲಿ ಹಚ್ಚಹಸುರಿನ ಮತ್ತು ಶಾಂತಿ ಸಮಾಧಾನದ ಜಗತ್ತಿನತ್ತ ಯುವಜನರು ಎಂಬ ಧ್ಯೇಯದೊಂದಿಗೆ ಚಿಂತನ ಮಂಥನ ನಡೆಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಫ್ರಾನ್ಸಿಸ್ ಸೆರಾವೊ ನುಡಿದರು.
ಎಸ್ಸಿವೈಎಂ ಕೇಂದ್ರೀಯ ಸಮಿತಿ, ಐಸಿವೈಎಮ್ ಮೂಡುಬಿದರೆ ವಲಯ ಸಮಿತಿ ಹಾಗೂ ಐಸಿವೈಎಮ್ ಶಿರ್ತಾಡಿ ಘಟಕದ ಜಂಟಿ ಆಶ್ರಯದಲ್ಲಿ ಶಿರ್ತಾಡಿಯ ಕಾರ್ಮಲ್ ಮಾತೆಯ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಮಂಗಳೂರು ಧರ್ಮಪ್ರಾಂತ್ಯದ ಯುವ ಸಮ್ಮೇಳನ ಡಿವೈಸಿ-2015ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಚಿವ ಕೆ. ಅಭಯಚಂದ್ರ ಜೈನ್ ಮೀನುಗಳನ್ನು ಅಕ್ವೇರಿಯಂಗೆ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಧರ್ಮಪ್ರಾಂತ್ಯದ ವಿಗಾರ್ ಜೆರಾಲ್ ವಂ.ಮೊನ್ಸಿಂಞೊರ್ ಡೆನಿಸ್ ಮೊರಾಸ್ ಪ್ರಭು, ಮೂಡುಬಿದರೆ ವಲಯದ ಪ್ರಧಾನ ಧರ್ಮಗುರು ರೆ.ಫಾ ಆಸ್ಟಿನ್ ಪೀಟರ್ ಪೆರಿಸ್ ಯುವಜನರಿದ್ದಲ್ಲಿ ಹೊಸತನವಿದೆ, ವೈಶಿಷ್ಟ್ಯತೆಯಿದೆ. ಯುವಜನರಿಂದಲೇ ಸಮಾಜ ಬಲಶಾಲಿಯಾಗುವುದು ಸಾಧ್ಯ ಎಂದರು. ಮೂಡುಬಿದರೆ ವಲಯ ಐಸಿವೈಎಮ್ ನಿರ್ದೇಶಕ ರೆ.ಫಾ ಬೇಸಿಲ್ ವಾಸ್ ಬೈಬಲ್ ವಾಚನ ವಾಚಿಸಿ ಪ್ರವಚನ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಮ್ ಹಾಗೂ ವೈಸಿಎಸ್ ನಿರ್ದೇಶಕ ವಂದನೀಯ ಗುರು ರೊನಾಲ್ಡ್ ಪ್ರಕಾಶ್ ಡಿಸೋಜಾ, ಶಿರ್ತಾಡಿ ಚರ್ಚ್ ಧರ್ಮಗುರು ರೆ.ಫಾ ಫ್ರಾನ್ಸಿಸ್ ಕ್ರಾಸ್ತಾ, ಮೂಡುಬಿದರೆ ಪುರಸಭಾ ಸದಸ್ಯ ಪಿ.ಕೆ. ಥೋಮಸ್, ಶಿರ್ತಾಡಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೊ, ಕಾರ್ಯದರ್ಶಿ ಮರಿಯಾ ಲೀಟಾ ಪಿರೇರಾ, ಐಸಿವೈಎಮ್ ಕೇಂದ್ರೀಯ ಸಮಿತಿಯ ಕಾರ್ಯದರ್ಶಿ ಜ್ಯಾಕ್ಸನ್ ಡಿಕೋಸ್ತಾ, ಮೂಡುಬಿದರೆ ವಲಯ ಕಾರ್ಯದರ್ಶಿ ಅವಿಶ್ ಸಲ್ಡಾನ್ಹಾ, ಶಿತರ್ಾಡಿ ಘಟಕದ ಅಧ್ಯಕ್ಷ ಜೈಸನ್ ಪಿರೇರಾ, ಕಾರ್ಯದರ್ಶಿ ವಾಲೆಂಟಿನಾ ಕ್ಯಾಸ್ತೆಲಿನೋ ಉಪಸ್ಥಿತರಿದ್ದರು.
ಸಮ್ಮೇಳನದ ಲಾಂಛನ ರಚಿಸಿದ ರೋಹನ್ ಮಡಂತ್ಯಾರ್, ಐಸಿವೈಎಮ್ ಧ್ಯೇಯ ಗೀತೆಯನ್ನು ಧ್ವನಿ ಮುದ್ರಿಸಿದ ಕ್ಲೆರಿಟಾ ಮತ್ತು ತಂಡ ಹಾಗೂ ಡಿವೈಸಿ ಗೀತೆಯನ್ನು ಧ್ವನಿಮುದ್ರಿಸಿದ ರೋಬಿನ್ ಮತ್ತು ತಂಡ, ದ.ಕ. ಜಿಲ್ಲಾ ಸ್ನಾತಕೋತ್ತರ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾದ ಕರ್ನಾಟಕ ರಾಜ್ಯ ಐಸಿವೈಎಮ್ ಪ್ರತಿನಿಧಿ ವಿಯಾನ್ ರೋಬಿನ್ ವೇಗಸ್ ಅವರನ್ನು ಗೌರವಿಸಲಾಯಿತು.
ಮಂಗಳೂರು ಸಿಟಿ ವಲಯದ ಐಸಿವೈಎಮ್ ತಂಡ ಧ್ಯೇಯಗೀತೆಗೆ ನೃತ್ಯ ಪ್ರದರ್ಶನ ನೀಡಿದರು. ಐಸಿವೈಎಮ್ ಶಿರ್ತಾಡಿ ಘಟಕದ ತಂಡ ಪ್ರಾರ್ಥನಾ ಗೀತೆ ಹಾಡಿದರು. ಐಸಿವೈಎಮ್ ಕೆಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜಾ ಅಗ್ರಾರ್ ಸ್ವಾಗತಿಸಿ, ಮೂಡುಬಿದಿರೆ ವಲಯಾಧ್ಯಕ್ಷ ಅನೀಶ್ ಡಿಸೋಜಾ ಅಲಂಗಾರು ವಂದಿಸಿದರು. ವಿಯಾನ್ ರೋಬಿನ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ಖುಶಾಲಿ ಕಿನ್ನಿಗೋಳಿ ತಂಡದಿಂದ ಹಾಸ್ಯ ಕಾರ್ಯಕ್ರಮ ನೆರವೇರಿತು.
ಸಭಾ ಕಾರ್ಯಕ್ರಮದ ಮೊದಲು ಶಿರ್ತಾಡಿ ಸೇತುವೆ ಬಳಿಯಿಂದ ತೆರೆದ ವಾಹನದಲ್ಲಿ ನಾಸಿಕ್ ಬ್ಯಾಂಡ್, ಕೇರಳ ಚಂಡೆ, ಪೂರ್ಣಕುಂಭಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
