ಬಂಟ್ವಾಳ : ಬಿ.ಸಿ.ರೋಡ್ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸುದೀರ್ಘ 31ವರ್ಷಗಳ ಕಾಲ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪ್ರೇಮಕಲಾ ಶೆಟ್ಟಿ ಯವರನ್ನು ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಸನ್ಮಾನಿಸಿದರು.

ನಾಮನಿರ್ದೇಶಿತ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಸದಾನಂದ ಶೆಟ್ಟಿ , ಮೋಹನ್ ಶೆಟ್ಟಿ , ಪ್ರಭಾರ ವ್ಯವಸ್ಥಾಪಕ ಶೇಖರ್, ಸಿಬ್ಬಂದಿಗಳಾದ ಪದ್ಮನಾಭ , ರೋಹಿಣಿ , ಗೀತಾ ಕಾರಂತ್, ಕಸ್ತೂರಿ, ಜಯಲಕ್ಷ್ಮಿ, ಶೋಭಾ, ದಯಾನಂದ , ದಿನಕರ್, ಯೋಗೀಶ್ , ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
