ಕೈಕಂಬ: ಸೈಂಟ್ ರೇಮಂಡ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ಕ್ರಾಸ್ ಘಟಕ ಹಾಗೂ ಎ.ಜೆ.ಆಸ್ಪತ್ರೆ, ಲಯನ್ಸ್ ಕ್ಲಬ್ ಬಲ್ಮಠ ಇವುಗಳ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಕಾಲೇಜಿನ ಸಭಾಂಗಣದಲ್ಲಿ ಸೆ.30ರಂದು ಬುಧವಾರ ನಡೆಯಿತು. ರಕ್ತದಾನ ಶಿಬಿರವನ್ನು ಲಯನ್ ನಾಗೇಶ್ ಕುಮಾರ್ ಎಚ್.ಜೆ.ಎಫ್ ಉದ್ಘಾಟಿಸಿದರು. ರಕ್ತದಾನ ಶ್ರೇಷ್ಠದಾನವಾಗಿದ್ದು ಇನ್ನೊಬ್ಬರನ್ನು ರಕ್ಷಿಸಲು ಸಹಕಾರಿ ಆಗಿದೆ. ಸ್ವ ಇಚ್ಚೆಯಿಂದ ರಕ್ತವನ್ನು ದಾನ ಮಾಡಿ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ.ಸೆಲಿನ್ವಾಸ್ ಮಾತನಾಡಿ ಯುವಕರು ಹೆಚ್ಚು ಸೇವಾ ಮನೋಭಾವ ಬೆಳೆಸಿಕೊಂಡು ಇತರರಿಗೆ ಸಹಾಯ ಮಾಡಬೇಕು ಆಗ ಮಾತ್ರ ಜೀವನ ಉತ್ತಮವಾಗುತ್ತದೆ ಎಂದರು. ವೇದಿಕೆಯಲ್ಲಿ ಲಯನ್ಗಳಾದ ಮರಿಯಮ್ ಮೊಂತೊ ಪಿರೇರಾ , ಮಮತಾ ರೆಬೆಲ್ಲಾ, ಜೊಸೆಫ್ ವರ್ಗೀಸ್, ಡೆರಿಕ್ ಪಿಂಟೋ, ನಾಗೇಶ್, ರೋನಾಲ್ಡ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡೊಂಬಯ್ಯ ಇಡ್ಕಿದು, ರೆಡ್ಕ್ರಾಸ್ ಸಂಯೋಜಕಿ ಪ್ಲೊರಿನ್, ಹೆರೋಲಿನ್ ಉಪಸ್ಥಿತರಿದ್ದರು.
ಜೋಯ್ಲಿನ್ವಾಸ್ ಕಾರ್ಯಕ್ರಮ ನಿರೂಪಪಿಸಿದರು. ಮೆಲಿಟಾ ವಂದಿಸಿದರು.













