ಉಳ್ಳಾಲ: 19ನೇ ವರ್ಷದ ವೀರರಾಣಿ ಆಬ್ಬಕ್ಕ ಉತ್ಸವ ಸಮಿತಿಯ ಪ್ರಥಮ ಸಭೆ ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಹಾಲ್‍ನಲ್ಲಿ ನಡೆಯಿತು. ಉಳ್ಳಾಲ ವೀರರಾಣಿ ಆಬ್ಬಕ್ಕ ಉತ್ಸವ ಸಮಿತಿಯ ಸ್ವಾಗತ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವೀರರಾಣಿ ಆಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಯು.ಸದಾನಂದ ಬಂಗೇರ, ಫಾ.ಪ್ರವೀಣ್ ಜೋಯ್ ಸಲ್ಡಾನಾ, ತೋನ್ಸೆಪುಷ್ಕಳ್ ಕುಮಾರ್, ಯು.ಪಿ ಅಲಿಯಬ್ಬ, ಡಿ.ಎನ್ ರಾಘವ, ಎಂ.ವಾಸುದೇವ ರಾವ್, ಅಬ್ದುಲ್ ಅಝೀಝ್ ಹಕ್, ಲಕ್ಷ್ಮೀ ನಾರಾಯಣ ರೈ ಹರೇಕಳ, ತ್ಯಾಗಂ ಹರೇಕಳ, ಲೋಕನಾಥ್ ರೈ, ತುಕರಾಮ್, ಕೆ.ಎಂ.ಕೆ ಮಂಜನಾಡಿ, ರಾಧಕೃಷ್ಣ ರೈ, ಪ್ರಭಾಕರ ಜೋಗಿ, ಸತೀಶ್ ಭಂಡಾರಿ, ಬಾದ್‍ಷಾ ಸಾಂಬರ್‍ತೋಟ, ವಿಜಯ ಲಕ್ಷ್ಮಿ ಬಿ.ಶೆಟ್ಟಿ, ರತ್ನಾವತಿ ಜೆ ಬೈಕಂಪಾಡಿ, ನಮಿತಾ ಶ್ಯಾಂ, ದೇವಕಿ ಉಳ್ಳಾಲ್, ಧನಲಕ್ಷ್ಮೀ, ಮಲ್ಲಿಕಾ ಭಂಡಾರಿ, ಆನುಪಮ ಸಿ.ಬಬುಕಟ್ಟೆ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಸಮಿತಿ ಕಾರ್ಯಧ್ಯಕ್ಷರಾದ ದಿನಕರ್ ಉಳ್ಳಾಲ್ ಸ್ವಾಗತಿಸಿ ಕೋಶಾಧಿಕಾರಿ ಆನಂದ ಕೆ.ಆಸೈಗೋಳಿ ವಂದಿಸಿದರು. ಪ್ರ.ಕಾರ್ಯದರ್ಶಿ ಭಾಸ್ಕರ್ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.
