ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರಿಂದ ಸಂಸದರು ಕಮಿಷನ್ ಪಡೆದುಕೊಂಡಿದ್ದಾರೆ : ಡಿವೈಎಫ್‍ಐ ಆರೋಪ
ಉಳ್ಳಾಲ: ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿಯಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್ ಗುತ್ತಿಗೆ ದಾರರೊಂದಿಗೆ ಒಪ್ಪಂದ ಮಾಡಿ ಕೊಂಡು ಕಮೀಷನ್ ಪಡೆದಿರುವುದ ರಿಂದ ಕಾಮಗಾರಿ ವಿಳಂಬವಾದರೂ ಯಾವುದೇ ಗೋಜಿಗೆ ಹೋಗುತ್ತಿಲ್ಲ ಎಂದು ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನರಾಜ್ ಕುತ್ತಾರ್ ಆರೋಪಿಸಿದ್ದಾರೆ.
Dyfi (2)

Dyfi (3)

Dyfi (4)

 

Dyfi (9)

Dyfi (10)

Dyfi (11)

Dyfi (20)

Dyfi (23)

Dyfi (26)

Dyfi (28)

Dyfi (31)

Dyfiಅವರು ಉಳ್ಳಾಲ ವಲಯ ಡಿವೈಎಫ್‍ಐ ಸಮಿತಿ ವತಿಯಿಂದ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬ ಖಂಡಿಸಿ, ಟ್ರಾಫಿಕ್ ಜಾಮ್ ಪರಿಹಾರಕ್ಕೆ ಆಗ್ರಹಿಸಿ, ರಾ.ಹೆ66 ರ ಕಾಮಗಾರಿ ಶೀಘ್ರ ಪೂರ್ಣಗೊಳಿ ಸಲು ಒತ್ತಾಯಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಿಧಾನಗತಿಯಿಂದ ಸಾಗುತ್ತಿರುವ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಸರಿಯಾದ ಯೋಜನೆಯನ್ನು ರೂಪಿಸದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ತೊಕ್ಕೊಟ್ಟುವಿನ ಫ್ಲೈಓವರ್ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಸರಿಯಾದ ಸಮಯಕ್ಕೆ ಕಾರ್ಯಕ್ಷೇತ್ರಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಂಜೆ ವೇಳೆ ಯುವತಿಯರು 4 ಗಂಟೆಗೆ ಕಾರ್ಯಕ್ಷೇತ್ರವನ್ನು ಬಿಟ್ಟರೂ ತೊಕ್ಕೊಟ್ಟುವಿನಲ್ಲಿ ಉಂಟಾಗುವ ರಸ್ತೆ ತಡೆಯಿಂದಾಗಿ ಮನೆ ತಲುಪುವಾಗ ರಾತ್ರಿ 8 ಗಂಟೆಯಾಗುತ್ತಿದೆ. ಶಿರಾಡಿ ಘಾಟಿಗೆ ತೆರಳಿ ಕಾಮಗಾರಿ ವೀಕ್ಷಿಸುವ ಸಂಸದ ನಳಿನ್ ಕುಮಾರ್ ಅವರಿಗೆ ತೊಕ್ಕೊಟ್ಟುವಿನಲ್ಲಿ ನಡೆಯುವ ಕಾಮಗಾರಿಯನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಯಾವ ಲೆಕ್ಕಾಚಾರದಲ್ಲಿ ನಂ.1 ಪಟ್ಟ ದೊರೆತಿದೆ ಅನ್ನುವುದು ನಿಗೂಢವಾಗಿದೆ. ರಾ.ಹೆ ಕಾಮಗಾರಿ ನಡೆಸುವ ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಸಂಸದರು ದೊಡ್ಡ ಮೊತ್ತದ ಕಮೀಷನ್ ಪಡೆದುಕೊಂಡು ಶೀಘ್ರಗತಿಯ ಕಾವiಗಾರಿ ನಡೆಸಲು ಸ್ಪಂಧಿಸುತ್ತಿಲ್ಲ. ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುತ್ತೇವೆ ಎಂದರು.
ಈ ಸಂದರ್ಭ ಉಳ್ಳಾಲ ವಲಯ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಮುಖಂಡರುಗಳಾದ ರಫೀಕ್ ಹರೇಕಳ, ಸುನೀಲ್ ತೇವುಲ, ಭರತ್ ಕುತ್ತಾರ್, ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಜಯಂತ್ ನಾಯ್ಕ್, ಮಹಾಬಲ.ಟಿ.ದೆಪ್ಪೆಲಿಮಾರ್, ಜನಾರ್ದನ ಕುತ್ತಾರ್, ಇಬ್ರಾಹಿಂ ಅಂಬ್ಲಮೊಗರು, ಹರೀಶ್ ಕಲ್ಲಾಪು, ಹರೇಕಳ ಪಂಚಾಯತ್ ಸದಸ್ಯರಾದ ಅಶ್ರಫ್ , ಹನೀಫ್, ವಲಯ ಸಮಿತಿ ಪದಾಧಿಕಾರಿಯಾದ ರೋಹಿದಾಸ್ ಅಬ್ಬಂಜರ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *