ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬಂಟ್ವಾಳ ಜನಜಾಗೃತಿ ವಲಯ ಸಮಿತಿ ಕಲ್ಲಡ್ಕ್ಕ ವಲಯ ಇದರ ಆಶ್ರಯದಲ್ಲಿ ನವ ಜಿವನ ಸಮಿತಿಯ ಸದಸ್ಯರ ಪ್ರೇರಣಾ ಶಿಬಿರವನ್ನು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಲ್ಲಡ್ಕ ಇಲ್ಲಿ ನಡೆಯಿತು.
ಜನಜಾಗೃತಿ ವೇದಿಕೆ ಬಂಟ್ವಾಳದ ಮಾಜಿ ಅಧ್ಯಕ್ಷರಾದ ಶ್ರೀ ಎ.ಸಿ. ಭಂಡಾರಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯವ ಅನುಗ್ರಹದೊಂದಿಗೆ, ಪರಮ ಪೂಜ್ಯ ಡಾ| ವೀರೇಂದ್ರ ಹೆಗ್ಗಡೆಯವರ ಸಹಕಾರದಿಂದ ನಡೆಯುವ ಮಧ್ಯವರ್ಜನ ಶಿಬಿರದ ಮೂಲಕ ಸಾವಿರಾರು ಕುಟುಂಬಗಳು ಬೆಳಕನ್ನು ಕಂಡಿವೆ. ಮದ್ಯ ವರ್ಜನ ಶಿಬಿರದಲ್ಲಿ ಪ್ರೇರಣೆ ಪಡೆದ ಶಿಬಿರಾರ್ಥಿಗಳು ಪಾನಮುಕ್ತರಾಗಿ ಇದೀಗ ತಮ್ಮ ಸಂಸಾರದೊಂದಿಗೆ ಹೊಸ ಜೀವನವನ್ನು ಕಂಡು ಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಗೌರವದ ವ್ಯಕ್ತಿಗಳಾಗಿ ಬದುಕನ್ನು ರೂಪಿಸಿ ಕೊಳ್ಳತ್ತಿರುವ ಬಗ್ಗೆ ಶುಭ ಹಾರೈಸಿದರು.
ಮಾಜಿ ಶಾಸಕರಾದ ಶ್ರೀ ಎ ರುಕ್ಮಯ್ಯ ಪೂಜಾರಿಯವರು. ಕುಡುಕುತನ ವು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲ ಆತನ ಸಂಸಾರವನ್ನೇ ಬಲಿತೆಗೆದು ಕೊಳ್ಳತ್ತದೆ. ಇಂತಹ ಶಿಬಿರಗಳು ಪಾನ ಮುಕ್ತರನ್ನಾಗಿ ಮಾಡುವ ಜೊತೆಗೆ ಹೊಸ ಬದುಕಿಗೆ ಪ್ರೇರಣೆಯಾಗುತ್ತದೆ. ಯುವಕರು ಸದೃಢ ಸಮಾಜದ ಆಧಾರಸ್ತಂಭ ತಮ್ಮ ಜೀವನವನ್ನು ಸುಂದರಗೊಳಿಸಿ ಇತರರಿಗೆ ಪ್ರೇರಕರಾಗಿರಬೇಕು. ಎಂದು ತಿಳಿಸಿದರು.
ಶಿಬಿರಾಧಿಕಾರಿಂಯಾದ ಶ್ರೀ ದೇವಿ ಪ್ರಸಾದ್ ಸುವರ್ಣರವರು ಮದ್ಯಪಾನಕ್ಕೆ ದಾಸರಾಗುವುದರಿಂದ ಕುಟುಂಬದ ನಾಶಕ್ಕೆ ಕಾರಣವಾಗುತ್ತದೆ. ಶ್ರೀ ಕ್ಷೇತ್ರದ ವತಿಯಿಂದ ಹಲವು ಕುಟಿಉಂಬಗಳು ಇಂದು ಬೆಳಕನ್ನು ಕಾಣುತ್ತಿವೆ. ಪಾನಮುಕ್ತ ಜೀವನವು ಸುಂದರ ಬದುಕಿಗೆ ದಾರಿದೀಪವಾಗಿವೆ. ಅಲ್ಲದೆ. ವ್ಯಸನಿಯ ತೊಳಲಾಟ, ವೇದನೆಯು ಹೇಗೆ ಮುಂದಿನ ಬದುಕಿಗೆ ಹೊಸ ಪ್ರೇರಣೆಯಾಗಿದೆ ಎಂಬುದಾಗಿ ತರಬೇತಿ ಹಾಗೂ ಶಿಬಿರದ ಶಿಬಿರಾರ್ಥಿಗಳನ್ನು ಯಾವ ರೀತಿಯಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿಸಿದರು. ಶಿಬಿರಾರ್ಥಿಗಳನ್ನು ನವ ಜೀವನ ಪಡೆದ ಸದಸ್ಯರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯ ಸದಸ್ಯರನ್ನು ವೇದಿಕೆಗೆ ಕರೆದು ಪತಿಯಿಂದ ಪತ್ನಿಯ ಮುಡಿಗೆ ಹೂವನ್ನು ಮುಡಿಸಿ ಹಣೆಗೆ ಸಿಂಧೂರವನ್ನು ಇಡುವ ಮೂಲಕ ನವಜೀವನಕ್ಕೆ ಮತ್ತಷ್ಟು ಪ್ರೇರಣೆಯನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯದ ಅಧ್ಯಕ್ಷರಾದ ಶ್ರೀ ಆನಂದ ಸಾಲ್ಯಾನ್ ವಹಿದ್ದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ಶ್ರೀಯುತ ಪ್ರಕಾಶ್ ಕಾರಂತ್, ಜನಜಾಗೃತಿ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಶ್ರೀ ಕಿರಣ್ ಹೆಗ್ಡೆ, ಯೋಜನಾಧಿಕಾರಿ ಸುನೀತಾ ನಾಯಕ್, ಕಲ್ಲಡ್ಕ ವಲಯ ಅಧ್ಯಕ್ಷರಾದ ಶ್ರೀಯುತ ವೆಂಕಟ್ರಾಯ ಪ್ರಭು ಹಾಗೂ ಶ್ರೀ ಬಡ್ಯಪ್ಪ ಶೆಟ್ಟಿ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ಶ್ರೀ ಶಿವಪ್ಪ ಸ್ವಾಗತಿಸಿ, ನವ ಜೀವನ ಸಮಿತಿಯ ಸದಸ್ಯರಾದ ಶ್ರೀಯುತ ಯೋಗೀಶ್ ವಂದಿಸಿದರು. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಲ್ಲಡ್ಕ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಕೊಟ್ಟಾರಿಯವರು ಕಾರ್ಯಕ್ರಮ ನಿರೂಪಿಸಿದರು.
