ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರು ಸಮೀಪದ ನೇಲ್ಯಪಲ್ಕೆ ಎಂಬಲ್ಲಿ ವಿವಾಹ ನಿಶ್ಚಿತಾರ್ಥಗೊಂಡ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಮಡ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಇಲ್ಲಿನ ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬವರ ಪುತ್ರಿ ರೂಪಲತಾ (24) ಎಂದು ಗುರುತಿಸಲಾಗಿದ್ದು, ಇದೇ 20ರಂದು ಕಕ್ಯಪದವು ಯುವಕನೊಂದಿಗೆ ಈಕೆಗೆ ವಿವಾಹ ನಿಶ್ಚಿತಾರ್ಥ ನಡೆದಿತ್ತು ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ ಎಂದಿನಂತೆ ತಂದೆ ಕೃಷ್ಣಪ್ಪ ಪೂಜಾರಿ ಕೂಲಿ ಕೆಲಸಕ್ಕೆ ಹೋಗಿದ್ದು, ಸಹೋದರ ನಿತಿನ್ ಮಂಗಳೂರು ಕಪಾಟು ತಯಾರಿಕಾ ಘಟಕಕ್ಕೆ ಕೆಲಸಕ್ಕೆ ಹೋಗಿದ್ದರು. ತಾಯಿ ಕುಸುಮಾವತಿ ಸ್ಥಳೀಯ ಅಲ್ಲಿಪಾದೆ ಬ್ಯಾಂಕಿಗೆ ಹೋಗಿ ಬರುವಷ್ಟರಲ್ಲಿ ಮನೆಗೆ ಹೊರಗಿನಿಂದ ಬೀಗ ಹಾಕಿ ಮನೆಯೊಳಗೆ ದೇವರಕೋಣೆ ಬಳಿ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
