ಬಂಟ್ವಾಳ : ಪಾಣೆಮಂಗಳೂರು ಗ್ರಾಮದ ಶಾಂತಿಗುಡ್ಡೆ, ಬೋಳಂಗಡಿ, ಉಪ್ಪುಗುಡ್ಡೆ, ಬಂಗ್ಲೆಗುಡ್ಡೆ, ಬೊಂಡಾಲ, ರೆಂಗೇಲು, ಮೆಲ್ಕಾರ್, ಗುಡ್ಡೆಯಂಗಡಿ ಅಂಗನವಾಡಿಗಳನ್ನೊಳಗೊಂಡು ಮೆಲ್ಕಾರ್ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಜರಗಿತು.
ಪುರಸಭಾ ಸದಸ್ಯೆ ಸಂಜೀವಿ ಅವರು ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯೆಯರಾದ ಸಂಧ್ಯಾ, ಜೆಸಿಂತಾ, ಯುವ ಸಂಗಮದ ಅಧ್ಯಕ್ಷ ಶ್ರೀನಿವಾಸ, ಎಂ.ಎನ್.ಕುಮಾರ್, ಬಂಟ್ವಾಳ ಪುರಸಭೆ ನಾಮ ನಿರ್ದೇಶಕ ಸದಸ್ಯ ಸಿದ್ದಿಕ್ ಗುಡ್ಡೆಯಂಗಡಿ, ಸ್ತ್ರೀ ಶಕ್ತಿ ಗುಂಪಿನ ಅಧ್ಯಕ್ಷೆ ವಿಜಯ, ಸದಸ್ಯೆಯರು, ಪೆÇೀಷಕರು ಉಪಸ್ಥಿತರಿದ್ದರು.

28 09 15
ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರು, ಪೆÇೀಷಕರು ತಯಾರಿಸಿದ ವಿವಿಧ ಬಗೆಯ ಪೌಷ್ಟಿಕ ಆಹಾರವನ್ನು ಪ್ರದರ್ಶಿಸಿ, ಉಣಬಡಿಸಲಾಯಿತು. ವಿಜೇತರಿಗೆ ಬಹುಮಾನ ನೀಡಲಾಯಿತು.
ಮೆಲ್ಕಾರ್ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಸಂತಿ ಅವರು ಸ್ವಾಗತಿಸಿ, ವಂದಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾರತಿ ಅವರು ಪ್ರಸ್ತಾವಿಸಿದರು. ಶಾಂತಿಗುಡ್ಡೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ದೇವಕಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *