ಕೈಕಂಬ: ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣದ ಪಾತ್ರ ಮಹತ್ವದ್ದಾಗಿದ್ದು, ಇದರಿಂದಾಗಿ ಇಡೀ ಜಗತ್ತಲ್ಲಿ ಕ್ರಾಂತಿಯೇ ಸೃಷ್ಟಿಯಾದಂತಾಗಿದೆ ಎಂದು ನಿವೃತ್ತ ಶಿಕ್ಷಕ ಮಾಧ ಮಯ್ಯ ಹೇಳಿದ್ದಾರೆ.
ಅವರು ಸೆ.27ರಂದು ಆದಿತ್ಯವಾರ ಸಂಜೆ ಗುರುಪುರ ಕೈಕಂಬದ ಗಣೇಶ್ ಕಟ್ಟೆಯಲ್ಲಿ ದ ರಾಟ್ಷ್ರೀಯ ಸಾಕ್ಷರತಾ ಸಮಿತಿ, ಸ್ಮಿತಾ ಕಂಪ್ಯೂಟರ್ ಎಜುಕೇಶನ್ ಕೈಕಂಬ ಇದರ 12ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.
.ಇಂದು ಕೈಕಂಬದ ಸ್ಮಿತಾ ಕಂಪ್ಯೂಟರ್ ಸಂಸ್ಥೆಯಿಂದ ಹಲವಾರು ಮಂದಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಂಪ್ಯೂಟರ್ ಇಲ್ಲದೆ ಯಾವುದೂ ಇಲ್ಲ ಎಂಬ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಗ್ರಾಮೀಣ ಜನರಿಗೆ ಕಂಪ್ಯೂಟರ್ ಶಿಕ್ಷಣ ದೊರಕಿಸಿಕೊಡುವಲ್ಲಿ ಸ್ಮಿತಾ ಸಂಸ್ಥೆ ಮಹತ್ವದ ಹೆಜ್ಜೆ ಇರಿಸಿದೆ ಎಂದು ಅವರು ಕೊಂಡಾಡಿದರು.
ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜೇಶ್ ಭಟ್ ಮುಂಬೈನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ರಮೇಶ್ ಕುಲಶೇಖರ, ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಮಹೇಶ್ ಶೆಟ್ಟಿ ಸಂಸ್ಥೆಯ ವ್ಯವಸ್ಥಾಪಕ ಸುಬ್ರಹ್ಮಣ್ಯ ಜಿ.ಟಿ., ಸಂತೋಷ್ ಪೊಳಲಿ, ಶಿವಾನಂದ ಆಚಾರ್ಯ, ಧನಲಕ್ಷ್ಮಿ, ಜಯಶ್ರೀ, ಹಾಗೂ ಸ್ಮಿತಾ ಕಂಪ್ಯೂಟರ್ ಎಜುಕೇಶನ್ ಹಳೆ ವಿದ್ಯಾರ್ಥಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಕಾರ್ಯಕ್ರಮ, ವಿನೋದಾವಳಿ ನಡೆದವು. ಭಸ್ಮಾಸುರ ಮೋಹಿ ಎಂಬ ಯಕ್ಷಗಾನ ಕಾರ್ಯಕ್ರಮದ ಕೊನೆಯಲ್ಲಿ ನಡೆಯಿತು.



















