ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ಮಿತ್ತಮಜಲು ಕುಡುಮಂದೂರು ಕಂಬಳಗದ್ದೆಯಲ್ಲಿ ಸ್ಥಳೀಯ ಶ್ರೀರಾಮ ಹಿಂದೂ ಸಂಸ್ಕ್ರತಿ ಮಂದಿರ ವತಿಯಿಂದ ಭಾನುವಾರ ನಡೆದ ‘ತುಳುನಾಡ ಕೃಷಿ ಕ್ರಾಂತಿ, ಕೆಸರ್‍ಡ್ ಒಂಜಿ ದಿನ’ ಕಾರ್ಯಕ್ರಮದಲ್ಲಿ ಹಿರಿಯರು-ಕಿರಿಯರು ಎನ್ನದೆ ಅಪಾರ ಮಂದಿ ಉತ್ಸಾಹದಿಂದ ಪಾಲ್ಗೊಂಡರು.
27btl-Inaugurtn

27btl-Kesaru

DSC_1817

DSC_1816

DSC_1815

DSC_1813
ಇಲ್ಲಿನ ಪಾಳು ಬಿದ್ದ ಗದ್ದೆಯ ಒಂದು ಬದಿ ಮಹಿಳೆಯರು ನೇಜಿ ನೆಡುವ ಮೂಲಕ ‘ತುಳುನಾಡ ಕೃಷಿ ಕ್ರಾಂತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಇನ್ನೊಂದೆಡೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮತ್ತು ಕಂಬಳಗದ್ದೆ ಮಾಲೀಕರಾದ ಕುಶಲ ಎನ್.ಶೆಟ್ಟಿ ಅವರು ವಿವಿಧ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮತ್ತು ಸಂಘಟಕ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಸೀತಾರಾಮ್ ಅಗೋಳಿಬೆಟ್ಟು ಅವರು ಸ್ವತ: ಗದ್ದೆಗೆ ಇಳಿದು ನೇಜಿ ನಾಟಿ ಮಾಡುವ ಮೂಲಕ ಗಮನ ಸೆಳೆದರು.
ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ. ಆನಂದ, ಹಿಂದೂ ಸಂಸ್ಕ್ರತಿ ಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಶೆಟ್ಟಿ ಕೊಯಮಜಲು, ಜಯಕರ್ನಾಟಕ ಜಿಲ್ಲಾಧ್ಯಕ್ಷ ಶ್ರೀಕಾಂತ ಶೆಟ್ಟಿ, ರೈತ ಸಂಘ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲಗುತ್ತು ಪುಣಚ, ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾಲ್ಲೂಕು ಕಾರ್ಯದರ್ಶಿ ಸುದೇಶ್ ಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯಶವಂತ ಡಿ., ಪ್ರಮುಖರಾದ ಪರಮೇಶ್ವರ ಐತಾಳ ಕಂದೂರು, ರಾಮ್‍ದಾಸ್ ಬಂಟ್ವಾಳ, ಬಿ.ದೇವದಾಸ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.
ಸ್ಪರ್ಧೆ:
ಇದೇ ವೇಳೆ ಪುರುಷರಿಗೆ ಹಗ್ಗ ಜಗ್ಗಾಟ, ಕಬಡ್ಡಿ, ತಪ್ಪಂಗಾಯಿ, ನಿಧಿ ಹುಡುಕುವುದು., ಮಹಿಳೆಯರಿಗೆ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಮಕ್ಕಳಿಗೆ 100 ಮೀ. ಓಟ, ಲಿಂಬೆ ಚಮಚ, ಸಂಗೀತ ಕುರ್ಚಿ, ಮೂರು ಕಾಲಿನ ಓಟ ಮತ್ತಿತರ ಕ್ರೀಡಾ ಸ್ಪರ್ಧೆಯಲ್ಲಿ ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡರು.
ದಿನಕರ್ ಮಿತ್ತಮಜಲು ಸ್ವಾಗತಿಸಿ, ತುಳು ಸಾಹಿತಿ ದಯಾನಂದ ಕತ್ತಲ್‍ಸಾರ್, ಪುರುಷೋತ್ತಮ, ರಾಜೇಂದ್ರ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *