ಬಂಟ್ವಾಳ : ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್ ಮೇಲ್ಸೆತುವೆ ಮುಖ್ಯವೃತ್ತದಲ್ಲಿಯೇ ಹೊಂಡ ಗುಂಡಿಗಳು ಬಾಯ್ದೆರೆದು ಕುಳಿತಿದೆ. ಇಲ್ಲಿ ಸಂಚರಿಸಲು ಸಾಕಷ್ಟು ಬ್ಯಾಲೆನ್ಸ್ ಮಾಡಬೇಕಾದ ಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಲ್ ನಿರ್ಮಾಣವಾದ ಬಳಿಕ ಇಲ್ಲಿನ ಹಳೆಯ ವೃತ್ತವನ್ನು ತೆಗೆದು ಹಾಕಲಾಗಿತ್ತು. ಹೊಸ ವ್ರತ್ತವನ್ನು ಮಾಡುವಾಗ ಡಾಮರನ್ನು ಅಗೆದು ತೆಗೆದು ಮತ್ತೆ ಡಾಮರು ಹಾಕದೇ ಇರುವುದರಿಂದ ಇಲ್ಲಿ ಗುಂಡಿ ಬಿದ್ದಿದೆ. ಈ ಬಗ್ಗೆ ಪ್ರಾಧಿಕಾರಕ್ಕೆ ಪೋಲಿಸ್ ಇಲಾಖೆ ದೂರು ನೀಡಿತ್ತು.
ಯಾವುದೇ ಲಘ ಅಥವಾ ಘನ ವಾಹನ ರಸ್ತೆ ನೇರ ಇದೆ ಎಂದು ಬಂದಲ್ಲಿ ಗುಂಡಿಗೆ ಬಿದ್ದು ಎಳುವಾಗ ಅದರ ಯಾವುದಾದರು ಒಂದು ಭಾಗ ತುಂಡರಿಸಲ್ಪಡುವುದು ಸಾಮಾನ್ಯವಾಗುತ್ತಿದೆ.

ವಾಹನ ಸಂಚಾಲಕರಿಗೆ ಇದೊಂದು ಶಾಪವಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿಯಲಿ ಸಂಚರಿಸುವ ಚಾಲಕ ಯಾವುದೇ ದಿಕ್ಕಿಗೆ ಹೋಗುವುದಿದ್ದರು ವೃತ್ತ ಪೂರ್ತಿ ಗುಂಡಿಯಿಂದ ಸ್ವಯಂ ವೇಗ ನಿಯಂತ್ರಿಸಿ ವಾಹನ ಚಲಾಯಿಸಬೇಕು.
ರಾತ್ರಿ ಹೊತ್ತು ವೇಗವಾಗಿ ಬಂದು ದಡಾರನೆ ಉಬ್ಬುತಗ್ಗು ಹೊಂಡದಲ್ಲಿ ಬಿದ್ದು ಮೇಲೆಲುವ ಘನ ಮತ್ತು ಲಘು ವಾಹನ ಚಾಲಕರು ಪ್ರಾಣವನ್ನು ಬಿಗಿ ಹಿಡಿದು ಪ್ರಯಾಣಿಸ ಬೇಕು. ಈ ರಸ್ತೆಯನ್ನು ರಿಪೇರಿ ಮಾಡಿಕೊಡಲು ಎಲ್ಲಾ ಇಲಾಖೆಗಳು ರಾ.ಹೆ. ಪ್ರಾಧಿಕಾರಕ್ಕೆ ಮನವಿ ಮಾಡಿತ್ತು. ಆದರೆ ಪ್ರಯೋಜನ ಶೂನ್ಯ.
ಆದರೆ ಅಂದಿನಿಂದ ಇಂದಿನ ತನಕ ಯಾವುದೇ ಪ್ರಕ್ರಿಯೆ ಪ್ರಾಧಿಕಾರದಿಂದ ನಡೆದಿಲ್ಲ. ಪ್ರಶ್ನಿಸುವವರು ಇಲ್ಲ. ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ ಕಾಂಕ್ರಿಟೀಕರಣ ಮಾಡಬೇಕು ಎಂಬ ಆಗ್ರಹವು ಇತ್ತು. ಆದರೆ ನಮ್ಮ ಜನಕ್ಕೆ ಹೇಗಿದ್ದರೂ ಆಗುತ್ತದೆ ಎಂಬ ಧೋರಣೆ ಇಲಾಖೆಯದು. ಹಾಗಾಗಿ ಕೇಳುವವರು ಇಲ್ಲದ ಪರಿಸ್ಥಿತಿ ಬಿ.ಸಿ.ರೋಡ್ ಹೆದ್ದಾರಿಯದು.
ಚಿತ್ರ ಕಿಶೋರ್ ಪೆರಾಜೆ




