ಮೂಡುಬಿದಿರೆ: ಕಾಂತಾವರ ಕನ್ನಡಸಂಘವು ನಲುವತ್ತನೇ ವರುಷಕ್ಕೆ ಕಾಲಿಟ್ಟ ಸಂದರ್ಭದ ಸಂಭ್ರಮಕ್ಕೆ ಈ ಗ್ರಾಮದಲ್ಲೇ ಹುಟ್ಟಿ ಬೆಳೆದು ಕರ್ನಾಟಕದ ಏಕೀಕರಣಕ್ಕೆ ವಿಶೇಷವಾಗಿ ಹೋರಾಡಿದ ಕೆ.ಬಿ (ಕಾಂತಾವರ ಬಾರಾಡಿ) ಜಿನರಾಜ ಹೆಗ್ಡೆಯವರ ಹೆಸರನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ “ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕøತಿಕ ಏಕೀಕರಣ ಪ್ರಶಸ್ತಿ” ಎಂಬ ಪ್ರಶಸ್ತಿಯನ್ನು 2015ರಿಂದ ನೀಡಲು ನಿರ್ಧರಿಸಿದೆ.
ಈ ಬಾರಿ ಪ್ರಪ್ರಥಮವಾಗಿ ಪ್ರಶಸ್ತಿಯನ್ನು ನಾಡುನುಡಿಗೆ ವಿಶೇಷ ಸೇವೆ ಸಲ್ಲಿಸುತ್ತಿರುವ ಕ.ಸಾ.ಪ ದ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ನೀಡಲು ನಿರ್ಧರಿಸಲಾಗಿದೆ. ರೂಪಾೈ ಹತ್ತು ಸಾವಿರ ನಗದು ಮತ್ತು ತಾಮ್ರಪತ್ರವನ್ನೊಳಗೊಂಡ ಈ ಪ್ರಶಸ್ತಿ ಪ್ರದಾನ ಸಮಾರಂಭವು ಕಾಂತಾವರದಲ್ಲಿರುವ ಜಿನರಾಜ ಹೆಗ್ಡೆ ಸ್ಮಾರಕ ‘ಕನ್ನಡಭವನ’ದಲ್ಲಿ ನವಂಬರ್ 1 ರಂದು ಮಂಗಳೂರು ವಿ.ವಿ.ಯ ಕುಲಪತಿಗಳಾದ ಕೆ. ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

