ಗುರುಪುರ ಕೈಕಂಬ ಸಾರ್ವಜನಿಕ ಗಣೇಶೋತ್ಸವದ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲ್ಪಡುವ ಬೆನಕಧಾಮದ ಕಟ್ಟಡದ ಶಿಲಾನ್ಯಾಸ ಸೆ.25ರಂದು ಶುಕ್ರವಾರ ಬೆಳಗ್ಗೆ ಕೈಕಂಬ ಗಣೇಶ್ ಕಟ್ಟೆಯ ಬಳಿ ನಡೆಯಿತು.
ಕಂದಾವರ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಸುರೇಶ್ ಭಟ್ ಪೂಜಾ ವಿಧಿವಿದಾನಗಳನ್ನು ನೆರವೇರಿಸಿದ ಬಳಿಕ
ಗಣೇಶೋತ್ಷವ ಸಮಿತಿಯ ಅಧ್ಯಕ್ಷ ವಿನೋದ್ ಮಾಡ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಉಳಿಪಾಡಿಗುತ್ತು ರಾಜೇಶ್ ನ್ಯಾಕ್ , ಉದ್ಯಮಿ ಯತಿರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಗಣೇಶೋತ್ಸವ ಸಮಿತಿ ಗೌರವಧ್ಯಕ್ಷ ಜಗಜೀವನ್ ದಾಸ್, ರಮೇಶ್ ಮಲ್ಲಿ , ರಾಜು ಕೈಕಂಬ, ಕಾರ್ಯದರ್ಶಿ ಮಹೇಶ್ ಶೆಟ್ಟಿ, ಶ್ರೀಧರ ರಾವ್ , ಸುಧೀಂದ್ರ ಭಟ್ ಮತ್ತು ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರು ಕಾರ್ಯಾಕಾರಿ ಸಮಿತಿಯ ಪಧಾದಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.













