ಮೂಡುಬಿದರೆ: ಬೆಳುವಾಯಿ ವಲಯದ ಮೂಡುಮಾರ್ನಾಡು ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ನಡೆಯಿತು.
ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ , ಸಮನ್ವಯ ಸಮಿತಿ ಗೌರವ ಸದಸ್ಯ ಶ್ರೀನಾಥ್ ಎನ್.ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ, ಮೂಡುಮಾರ್ನಾಡು ಅಂಗನವಾಡಿ ಕೇಂದ್ರದ 33 ಪುಟಾಣಿಗಳಿಗೆ ಸಮವಸ್ತ್ರ ವಿತರಿಸಿದರು. ಸಮನ್ವಯ ಸಮಿತಿ ಅಧ್ಯಕ್ಷೆ, ಗ್ರಾ.ಪಂ.ಸದಸ್ಯೆ ಸಂಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

16 ವರ್ಷ ಅಂಗನವಾಡಿ ಸಹಾಯಕಿಯಾಗಿದ್ದು ನಿವೃತ್ತಿ ಹೊಂದಿದ ಶಾಂತಾ ಅವರನ್ನು ಸನ್ಮಾನಿಸಲಾಯಿತು.ಸ.ಪ್ರಾ.ಶಾಲೆ ಮೂಡುಮಾರ್ನಾಡು ಇದರ ಮುಖ್ಯೋಪಾಧ್ಯಾಯಿನಿ ವೇದಾವತಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಜೇಶ್ವರ ನಾಯಕ್, ಪಡುಮಾರ್ನಾಡು ಗ್ರಾ.ಪಂ.ಸದಸ್ಯ ಯಶೋಧರ ಆಚಾರ್ಯ, ನಿವೃತ್ತ ಶಿಕ್ಷಕ ಕಾಳಪ್ಪ ಶೆಟ್ಟಿ, ಹಿರಿಯ ನಾಗರಿಕ ಭುಜಬಲಿ ಹೆಗ್ಡೆ ಮುಖ್ಯ ಅತಿಥಿಯಾಗಿದ್ದರು. ಸ್ತ್ರೀ ಶಕ್ತಿ ಸದಸ್ಯರು, ಸಮನ್ವಯ ಸಮಿತಿ ಪದಾಧಿಕಾರಿಗಳು, ಮಕ್ಕಳ ಪೋಷಕರು ಹಾಜರಿದ್ದರು.ಸ್ತ್ರೀ ಶಕ್ತಿ ಸದಸ್ಯೆ ಲಲಿತಾ ಪ್ರಾರ್ಥನೆಯನ್ನು ನೆರವೇರಿಸಿದರು.ವಲಯ ಮೇಲ್ವೀಚಾರಕಿ ಶುಭ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮತಿ ಕೆ.ಟಿ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಕುಶಲ ಕಾರ್ಯಕ್ರಮ ನಿರೂಪಿಸಿ, ಆಶಾ ಕಾರ್ಯಕರ್ತೆ ಸುಮತಿ ಎಸ್. ವಂದಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ), ಸಮನ್ವಯ ಸಮಿತಿ, ರೂಪಶ್ರೀ – ದೀಪಶ್ರೀ ಸ್ತ್ರೀ ಶಕ್ತಿ ಗುಂಪು, ಮೂಡುಮಾರ್ನಾಡು ಅಂಗನವಾಡಿ ಕೇಂದ್ರದ ಮಕ್ಕಳ ಪೋಷಕರು ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
