ಮೂಡುಬಿದಿರೆ: ಜಾತ್ಯತೀತ ಹಬ್ಬವೆಂದೇ ಆಚರಿಸಲಾಗುತ್ತಿರುವ ಮೂಡುಬಿದರೆ ಗಣೇಶೋತ್ಸವಕ್ಕೆ ಸೋಮವಾರ ರಾತ್ರಿ ವೈಭವದ ತೆರೆಯನ್ನು ಎಳೆಯಲಾಯಿತು. ನಿಶ್ಮಿತಾ ಟವರ್ಸ್ ಎದುರಿನಿಂದ ಆಕರ್ಷಕ ಟ್ಯಾಬ್ಲೋ, ಹುಲಿವೇಷ, ಚೆಂಡೆ ಮೊದಲಾದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಅಲಂಗಾರು ಶ್ರೀಮಹಲಿಂಗೇಶ್ವರ ದೇವಸ್ಥಾನದಲ್ಲಿ ಗಣಪನ ವಿಗ್ರಹವನ್ನು ವಿಸರ್ಜಿಸಲಾಯಿತು.

IMG_0885

mbd_sep22_3 (1)

mbd_sep22_3 (3)

mbd_sep22_3 (6)

mbd_sep22_3 (7)

mbd_sep22_3 (8)
ಟ್ಯಾಬ್ಲೊ ಸ್ಪರ್ಧೆ:
ಪ್ರತಿವರ್ಷದಿಂದ ಈ ಬಾರಿಯೂ ಟ್ಯಾಬ್ಲೋ ಸ್ಪರ್ಧೆ ನಡೆದಿದ್ದು, ಮೂರು ಟಾಬ್ಲೋ ಪ್ರಥಮ, ಮೂರು ಟಾಬ್ಲೋ ದ್ವಿತೀಯ ಹಾಗೂ ಮೂರು ಟ್ಯಾಬ್ಲೋ ತೃತೀಯ ಸ್ಥಾನ ಪಡೆದಿದೆ. ಪ್ರಥಮ ಸ್ಥಾನಿಯಾದ ಟಾಬ್ಲೋಗಳಿಗೆ ತಲಾ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ತೃತೀಯ, ಭಾಗವಹಿಸಿದ ತಂಡಗಳಿಗೆ 2 ಸಾವಿರ ನೀಡಲಾಯಿತು.
ಮಿಜಾರು ಎಲೆಕ್ಟ್ರಿಕಲ್ ಪ್ರಸ್ತುತ ಪಡಿಸಿದ ಡೈನಾಸೋರ್, ಜಿ.ಕೆ ಡೆಕೋರೇಟರ್ಸ್ ಮಹಿಷಾ ಮರ್ದಿನಿ ಹಾಗೂ ನ್ಯೂ ರವಿ ಇಂಡಷ್ಟ್ರೀಸ್‍ನ ಅಮರಶಿಲ್ಪಿ ವೀರ ಶಂಭು ಕಲ್ಕುಡ ಪ್ರಥಮ ಸ್ಥಾನ ಪಡೆದಿದೆ. ಬೆಟ್ಕೇರಿ ಫ್ರೆಂಡ್ಸ್‍ನ ಕೂರ್ಮಾವತಾರ( ಸಮುದ್ರ ಮಥನ), ಲಿಟ್ಲ್ ಫ್ಲವರ್ ಇಂಜಿನಿಯರಿಂಗ್ ವಕ್ರ್ಸನ ರಕ್ತಬೀಜಾಸುರ ವಧೆ ಹಾಗೂ ಕೋಟೆಬಾಗಿಲು ಫ್ರೆಂಡ್ಸ್‍ನ ನಾಗಿನಿ ಮೋಕ್ಷ ಟ್ಯಾಬ್ಲೋ ದ್ವಿತೀಯ ಸ್ಥಾನಿಯಾಗಿದೆ.
ಜೈ ಶ್ರೀರಾಮ ಬಳಗ ಶ್ರೀ ಲಲಿತಾ ದೇವಿ ಮಹಾತ್ಮೆ, ದುರ್ಗಾ ಗ್ರೂಪ್ಸ್‍ನ ಶಿವಭಕ್ತ, ಬೊಲ್ಲಿ ಯುವಕರ ತಂಡದ ಶಬರಿಗೆ ಶ್ರೀರಾಮ ದರ್ಶನ ಟ್ಯಾಬ್ಲೋ ತೃತೀಯ ಬಹುಮಾನ ಪಡೆದಿದೆ.

By suddi9

Leave a Reply

Your email address will not be published. Required fields are marked *