ಬಂಟ್ವಾಳ: ತುಳುನಾಡಿನ ನೆಲ, ಜಲ, ಸಂಸ್ಕೃತಿಗೆ ಅನ್ಯಾಯವಾದಾಗ ತುಳುನಾಡ ರಕ್ಷಣಾ ವೇದಿಕೆ ಯಾವತ್ತೂ ಹೋರಾಟ ನಡೆಸಲಿದೆ. ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ನಮ್ಮ ಹೋರಾಟ ನಿರಂತರ ಮುಂದುವರಿಯಲಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ಇರ್ವತ್ತೂರುಪದವಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಅವರು ಘಟಕ ಉದ್ಘಾಟಿಸಿದರು. ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ ತುಳುನಾಡಿನ ಉಳಿವು ಬೆಳವಣಿಗೆಗಾಗಿ ನಡೆಯವ ಯಾವುದೇ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ರಾಜಕೀಯ ರಹಿತವಾಗಿ ಸಂಘಟಿತರಾಗಬೇಕಾಗಿದೆ. ತುಳುನಾಡಿನ ಕಂಪನಿಗಳಲ್ಲಿ ಇತರೆಡೆಗಳ ಜನರಿಗೆ ಉದ್ಯೋಗ ಕೊಡುವುದರ ವಿರುದ್ಧವೂ ಹೋರಾಟ ನಡೆಸಬೇಕಾಗಿದೆ ಎಂದರು. ಕಲಾವಿದ ತಿಮ್ಮಪ್ಪ ಕುಲಾಲ್, ಆಲದಪದವು ಅಕ್ಷರ ಪ್ರತಿಷ್ಠಾನದ ಅಧ್ಯಕ್ಷ ಡಾ|ರಾಮಕೃಷ್ಣ ಎಸ್., ಸಂಚಾಲಕ ಗೋಪಾಲ ಅಂಚನ್, ತಾ.ಪಂ.ಸದಸ್ಯ ರಮೇಶ ಪೂಜಾರಿ ಕುಡುಮೇರು, ಉದ್ಯಮಿ ಮೋಹನ್ ಶೆಟ್ಟಿ ನರ್ವಲ್ದಡ್ಡ, ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಅಧ್ಯಕ್ಷ ಸುಂದರ ನಾಯ್ಕ, ನ್ಯಾಯವಾದಿ ಮೋಹನ್ದಾಸ್ ರೈ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕಾ ಜೈನ್, ಗ್ರಾ.ಪಂ.ಸದಸ್ಯರಾದ ಪ್ರಶಾಂತ್ ಕೋಟ್ಯಾನ್, ಜಯಶ್ರೀ, ಉದ್ಯಮಿಗಳಾದ ಐ.ಬಿ.ಸಂಜೀತ್ ಕುಮಾರ್, ನಝೀರ್ ಸಾಹೇಬ್, ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ, ಪಿ.ಕೆ.ಇದಿನಬ್ಬ, ಬಂಟ್ವಾಳ ಘಟಕ ಅಧ್ಯಕ್ಷ ಮಹೇಂದ್ರನಾಥ್ ಸಾಲೆತ್ತೂರು, ಇರ್ವತ್ತೂರು ಘಟಕ ಅಧ್ಯಕ್ಷ ಗಣೇಶ ಶೆಟ್ಟಿ, ಪುಂಜಾಲಕಟ್ಟೆ ಘಟಕ ಅಧ್ಯಕ್ಷ ರಮೇಶ ಶೆಟ್ಟಿ ಮಜಲೋಡಿ, ವಾಮದಪದವು ಘಟಕ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಪ್ರಮುಖರಾದ ರಕ್ಷಿತ್ ಕೆ.ಬಂಗೇರಾ, ಪ್ರಶಾಂತ್ ರಾವ್ ಕದ್ರಿ, ತೋಮಸ್ ಪಿಂಟೋ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಂಗ ಕಲಾವಿದರಾದ ದರ್ಶನ್ ಜೈನ್, ಹರೀಶ ಬಂಗೇರ ಆಲದಪದವು, ಉಮೇಶ್ ಕೋಟ್ಯಾನ್ ಆಲದಪದವು, ಕುಮುದಾಕ್ಷ ಕೋಟ್ಯಾನ್ ಕಜೆಕಾರು, ಸಂದೀಪ್ ಶೆಟ್ಟಿ ರಾಯಿ ಅವರನ್ನು ಸಮ್ಮಾನಿಸಲಾಯಿತು.
ಉಪಾಧ್ಯಕ್ಷ ಉಮೇಶ್ ಆಚಾರ್ಯ ಅವರು ಸ್ವಾಗತಿಸಿದರು. ಭರತ್ರಾಜ್ ಜೈನ್ ವಂದಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
