ಉಳ್ಳಾಲ: ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಧಾರ್ಮಿಕ ವಿದ್ಯೆಯ ಜೋತೆಗೆ ಲೌಕಿಕ ವಿದ್ಯೆಗೆ ಮಹತ್ವ ನೀಡುತ್ತಿದೆ ಎಂದು ಸೆಯ್ಯದ್ ಮದನಿ ದರ್ಗ ಸಮಿತಿ ಅಧ್ಯಕ್ಷ ಯು.ಎಸ್ ಹಂಝರವರು ಹೇಳಿದರು.
ಅವರು ಹಳೆಕೋಟೆ ಅನುದಾನಿತ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೆಯ್ಯದ್ ಮದನಿ ಪೌಢ ಶಾಲೆ ಮತ್ತು ಹಳೇ ವಿದ್ಯಾರ್ಥಿ ಗಳು ಅಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಳೇ ವಿದ್ಯಾರ್ಥಿಗಳು ಸೇರಿಕೊಂಡು ಶಿಕ್ಷಕರ ದಿನಾಚರಣೆ ಅಚರಿಸುವುದು ತುಂಬಾ ಸಂತೋಷದ ವಿಚಾರ. ಅದರೆ ನಿವೃತ ಅಧ್ಯಾಪಕರನ್ನು ಗುರುತಿಸಿ ಸನ್ಮಾನಿಸುದು ಉತ್ತಮ ಕೆಲಸ. ಒರ್ವ ಇಂಜಿನೀಯರ್ ಅಥವಾ ವೈಧ್ಯನಾಗಿದರೆ ಅತಾ ಶಿಕ್ಷರಿಂದ ಶಿಕ್ಷಣ ಪಡೆದಾಗಿದೆ. ಶಿಕ್ಷಕ ಹುದ್ದೆ ಬಹುದೊಡ್ಡ ಹುದ್ದೆ ಎಂದರು.


ಶಾಲಾ ಶಿಕ್ಷಕಿ ಮತ್ತು ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ ಕುರಿತಾಗಿ ಭಾಷಣ ಮಾಡಿದರು.ಈ ಸಂದರ್ಭ ನಿವೃತ ಅಧ್ಯಾಪಕ ಕಮಾಲಕ್ಷ ಸೇರಿದಂತೆ ಶಿಕ್ಷಕಿ ಶಿಕ್ಷಕಯಾರಿಗೆ ಸನ್ಮಾನಿಸಲಾಯಿತ್ತು.
ಮದನಿ ಶಿಕ್ಷಣ ಸಂಸ್ಥೆಯ ನಿವೃತ ಅಧ್ಯಾಪಕ ಕಮಾಲಕ್ಷ ಮಾತನಾಡಿ, ನನ್ನ ವಿದ್ಯಾರ್ಥಿಗಳ ಪ್ರೀತಿಪಾತ್ರನಾಗಲು ಸಾಧ್ಯವಾಗಿದೆ. ನಾನು ಈ ನಿವೃತ್ತನಾಗಿದರು ವಿದ್ಯಾರ್ಥಿಗಳು ನನ್ನ ಉಡುಕಿಕೊಂಡು ಬರುತ್ತಾರೆ ನನ್ನ ಜೀವನ ಸಾರ್ತಕ ಎಂದು ಸಂತೋಷ ಹಂಚಿಕೊಂಡರು.
ಕೋಟೆಪುರ ಟಿಪ್ಪು ಸುಲ್ತಾನ್ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಪಕ ಎಂ.ಎಚ್ ಮಲಾರ್, ಉಳ್ಳಾಲ ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ನ ಅಡಳಿತ ಅಧಿಕಾರಿ ಅಬ್ದುಲ್ ಲತೀಫ್, ಟಿಪ್ಪು ಸುಲ್ತಾನ್ ಕಾಲೇಜ್ನ ಮುಖ್ಯೋಪಾಧ್ಯರು ಬಿ.ಬಿ ಮೊಹೀದ್ದಿನ್, ಹಳೆಕೋಟೆ ಮಸ್ಜಿದುಲ್ ಅಲ್-ಕರೀಂನ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ, ಸೆಯ್ಯದ್ ಮದನಿ ಸಂಸ್ಥೆಯ ಸಂಚಾಲಕ ಹಾಜಿ.ಯು.ಎಚ್ ಮೊಹಮ್ಮದ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯು.ಎನ್ ಇಬ್ರಾಹೀಂ, ಉಳ್ಳಾಲ ನಗರ ಸಭೆ ಸದಸ್ಯ ಫಾರೂಕ್, ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಸಂಚಾಲಕ ಎಂ.ಎಚ್ ಇಬ್ರಾಹೀಂ, ಸುಲ್ತಾನ್ ಕನ್ಕ್ಷಸನ್ನ ಮಾಲಕ ಯು.ಬಿ ಮೊಹಮ್ಮದ್, ಸೆಯ್ಯದ್ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಇಮ್ತೀಯಾಝ್, ಸಹಶಿಕ್ಷಕ ರಸೂಲ್ ಮುಂತಾದರು ಈ ಸಂದರ್ಭ ಉಪಸ್ಥಿತರಿದರು.
ಮುಖ್ಯೋಪಾಧ್ಯಾಪಕರಾದ ಕೆಎಂಕೆ ಮಂಜನಾಡಿ ಸ್ವಾಗತಿಸದರು. ಶಾಲಾ ಮುಖ್ಯ ಮಂತ್ರಿ ಕು.ಅಫೀಫ ವಂದಿಸಿದರು.
ಶಾಲಾ ವಿದ್ಯಾರ್ಥಿನಿಗಳಾದ ಕು.ಸನಾ ಮತ್ತು ರಾಯೀಫ ಕಾರ್ಯಕ್ರಮ ನಿರೂಪಿಸಿದರು.

