ಕೈಕಂಬ:ಅಡ್ಡೂರು 29ನೇವರ್ಷದ ಸಾರ್ವಜನಿಕ ಗಣೇಶೋತ್ಸವದ ಸಭಾ ಕಾರ್ಯಕ್ರಮವು ಗುರುವಾರ ಬೆನಕ ಮಂಟಪದಲ್ಲಿ ನಡೆಯಿತು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ಪದ್ಮ ಪಾದನಂದ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಹಿಸಿದ್ದರು. ಮಂಗಳೂರು ಮಾಜಿ. ತಾ. ಪಂ.ಅಧ್ಯಕ್ಷ ಕೆ. ಹರೀಶ್ ಮೂಡುಶೆಡ್ಡೆ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಗದೀಶ ಸೇನಾವ, ಗುರುಪುರ ಮಾಜಿ ಪಂ ಸದಸ್ಯ ಕೆ.ಆದಮ್ ಕಳಸಗುರಿ, ನಂದ್ಯ ಸುಂದರ ಬೆಲ್ಚಡ,ಸುಬ್ಬಯ್ಯ ಭಂಡಾರಿ, ದಯಾನಂದ ಕತ್ತಲ್ಸಾರ್ ಧಾರ್ಮಿಕ ಉಪನ್ಯಾಶವನ್ನು ನೀಡಿದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.















