ಬಂಟ್ವಾಳ: ಆಷಾಢ ಮುಗಿದು ಶ್ರಾವಣ ಬಂತೆಂದರೆ ಹಬ್ಬಗಳ ಸರಮಾಲೆ. ಅಬಾಲವೃದ್ಧರಾಗಿ ಕಾಯುವುದು ಭಾದ್ರಪದ ಮಾಸಕ್ಕೆ. ಭಾದ್ರಪದ ಮಾಸದ ಹಬ್ಬಕ್ಕೆ ಶ್ರಾವಣ ಮಾಸದಿಂದಲೇ ತಯಾರಿ ಮಾಡಿಕೊಳ್ಳುವುದು ವಿಶೇಷ.
ಹೌದು ನೀವು ಊಹಿಸಿದಂತೆ ಗಣೇಶನ ಹಬ್ಬ. ಕನಿಷ್ಠ ಒಂದು ದಿನದಿಂದ ಒಂದು ತಿಂಗಳಿಗೂ ಹೆಚ್ಚು ಕಾಲ ಹಬ್ಬದ ಆಚರಣೆಯ ಸಂಭ್ರಮ. ಬಹುಶಃ ಭಾರತೀಯ ಹಬ್ಬಗಳ ಪೈಕಿ ಇಂತಹ ವೈಶಿಷ್ಟ್ಯತೆಯನ್ನು ಹೊಂದಿರುವುದು ಇದೊಂದೇ ಹಬ್ಬ. ದೇಶದಾದ್ಯಂತ ವಿವಿಧ ಶೈಲಿಗಳ ಮಣ್ಣಿನ ಅಥವ ಪಿ.ಒ.ಪಿಯಿಂದ ತಯಾರಿಸಿದ ಗಣಪತಿಗಳನ್ನು ಮಾಡಿ ಪೂಜಿಸಿ ನೀರಿಗೆ ಬಿಟ್ಟು ಸಂಭ್ರಮಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಚಳುವಳಿಗೆ ಪ್ರೇರಕ-ಪೂರಕ ವೇದಿಕೆಯಾಗಿದ್ದ ಈ ಗಣಪನ ಆರಾಧನೆ ಹಬ್ಬವಾಗಿ ಮಾರ್ಪಟ್ಟು ಇತ್ತೀಚಿನ ದಿನಗಳಲ್ಲಿ ಅದ್ದೂರಿತನಕ್ಕೆ ಮಣೆ ಹಾಕಿದೆ. ಅದ್ದೂರಿತನದ ಅಬ್ಬರದ ನಡುವೆ ಖರ್ಚಿನ ಹೆಸರಲ್ಲಿ ಹಣ ಸುಲಿಗೆ , ಸಾಂಸ್ಕೃತಿಕ ಕಾರ್ಯಕ್ರಮವೆಂಬ ಹೆಸರಿನಲ್ಲಿ ಸಮಾಜ ಮುಖಿಯಲ್ಲದ ಕಾರ್ಯಕ್ರಮಗಳ ಪ್ರದರ್ಶನ ಅಬ್ಬರದ ಕರ್ಕಶ ಶಬ್ದಗಳ ಘೋಷ್ಠಿಗಳು ನಾಗರೀಕತೆಗೆ ಪೂರಕವಗಿಲ್ಲದ ನೈತಿಕ ಅಧಃಪತನಕ್ಕೆ ಕಾರಣವಾಗುತ್ತಿದೆಯೋನೋ ಎಂಬ ಭಯ ಕಾಡುತ್ತಿದೆ. ಇವುಗಳೊಟ್ಟಿಗೆ ಮತ್ತೊಂದಿದೆ ಅಲಂಕಾರದ ಹೆಸರಿನಲ್ಲಿ ಪರಿಸರಕ್ಕೆ ಪೂರಕವಲ್ಲದ ಪ್ಲಾಸ್ಟಿಕ್, ರಾಸಾಯನಿಕ ಬಣ್ಣಗಳ ಬಳಕೆ.
ರಾಸಾಯನಿಕ ಬಣ್ಣಗಳ ಗಣಪನನ್ನು ಪಿ.ಒ.ಪಿಯಿಂದ ಮಾಡಿದ ಗಣಪನನ್ನು ನೀರಿಗೆ ಬಿಡುವುದರಿಂದ ನೀರು ಕಲುಷಿತಗೊಳ್ಳುತ್ತದೆಂಬ ಕನಿಷ್ಠ ಅರಿವು ಇಲ್ಲದಂತ ಪರಿಸ್ಥಿತಿ ಇಂದು ಎದುರಾಗಿದೆ. ನೀರು ಕಲುಷಿತಗೊಂಡಾಗ ಅದರಲ್ಲಿನ ಜಲಚರಗಳು ತೊಂದರಯನ್ನು ಅನುಭವಿಸುತ್ತವೆ. ಇದನ್ನು ಬಳಸುವ ಪಶುಗಳು ಜನಗಳು ಸಹ ತೊಂದರೆಗೀಡಾಗುತ್ತಾರೆ. ಇದಕ್ಕೆ ಬದಲಾಗಿ ಪರಿಸರ ಸ್ನೇಹಿ ಗಣಪನನ್ನು ಬಳಸಿಕೊಂಡರೆ…! ಬಣ್ಣರಹಿತ, ಶುದ್ದ ಮಣ್ಣಿನ ಗಣಪ, ಪರಿಸರ ಸ್ನೇಹಿ ಬಣ್ಣಗಳ ಗಣಪನನ್ನು ಬಳಸಿಕೊಂಡರೆ ಇಂಥ ಜಲಮಾಲಿನ್ಯದಿಂದ ಸ್ವಲ್ಪಮಟ್ಟಿಗಾದರೂ ಹೊರಬರಬಹುದು. ಪರಿಸರಸ್ನೇಹಿ ಕಾಗದದ ಕಲಾಕೃತಿಗಳನ್ನು ಅಲಂಕಾರಕ್ಕೆ ಬಲಸಿಕೊಂಡರೆ ಮುಂದಿನ ಪೀಳಿಗೆಗೆ ಒಂದಿಷ್ಟು ಆರೋಗ್ಯವಂತ ಸಮಾಜವನ್ನು ಕೊಡುಗೆಯಾಗಿ ಕೊಡಬಹುದು.
ಇಂಥದೊಂದು ಸಣ್ಣ ಪ್ರಯತ್ನ ಹುಸೇನಿಯವರಿಂದ. ‘ಮೈಸೂರು ಹುಸೇನಿ’ ಎಂದೇ ಹೆಸರಾಗಿರುವ ಇವರು ಸಾಂಜಿûೀ ಕಲೆಯ ಕಲಾವಿದರು. ಕೈಗೊಂದು ಕಾಗದ ಕತ್ತರಿ ಕೊಟ್ಟರೆ ಸಾಕು ಅದಕ್ಕೆ ಕಲ್ಪನೆಯ ಕಲೆಯನ್ನು ಸೇರಿಸಿ ಅದ್ಭುತ ಕಲಾಕೃತಿಯೊಂದನ್ನು ಕ್ಷಣಮಾತ್ರದಲ್ಲಿ ಸೃಷ್ಟಿಸಿ ನಿಮ್ಮ ಮುಂದೆ ಅನಾವರಣಗೊಳಿಸುತ್ತಾರೆ. ಇಂತಹ ಕಲಾಕೃತಿಗಳನ್ನು ಗಣಪನ ಆಲಂಕಾರಕ್ಕೆ ಬಳಸಿಕೊಂಡರೆ ……..!!
ಅದ್ಭುತವಾದ ಯೋಚನೆಯೊಂದು ಅವರಿಗೆ ಹೊಳೆದದ್ದೆ ಕಾರ್ಯರೂಪಕ್ಕೂ ತರಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಕಡೆ ಸಾಫಲ್ಯವನ್ನು ಗಳಿಸಿದ್ದಾರೆ.
“ಪರಿಸರ ಗಣಪ” ಎಂಬ ಕಲ್ಪನೆಯೊಂದರಿಂದ ಇಂದು ಅವರ ಕೈಯಲ್ಲಿ ಅರಳಿದ ಗಣಪನ ಕಲಾಕೃತಿಗಳು ನೋಡಲು ಸುಂದರವಾಗಿದ್ದು ನೋಡುವವರನ್ನು ಸೆಳೆಯುವುದಲ್ಲದೆ ತಾವೂ ಮಾಡಬೇಕೆಂಬ ಹಂಬಲ ಮೂಡುತ್ತದೆ. ಹಂಬಲ ಹೊರಬಂದ ತಕ್ಷಣ ನಿಮ್ಮ ಕೈಗೊಂದು ಕತ್ತರಿ ಮತ್ತು ಕಾಗದವನ್ನು ಕೊಟ್ಟು ನಿಮ್ಮ ಕಲ್ಪನೆಯ ಕಲಾಕೃತಿ ಅರಳಲು ಅವಕಾಶ ನೀಡುತ್ತಾರೆ. ಒಂದೆರಡು ಬಾರಿ ಸೋತರೂ ಐದಾರು ಪ್ರಯತ್ನಗಳಲ್ಲಿ ನಿಮ್ಮ ಮುಖದಲ್ಲೊಂದು ಮುಗುಳು ನಗೆ ತೇಲಿಹೋಗುವುದು ಶತಸಿದ್ಧ.
‘ಸಾಂಜಿûೀ ಕಲಾ ಲೋಕ’ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿರುವ ಇವರು ಪರಿಸರದ ಪ್ರೇಮಿಯಾಗಿ ಪರಿಸರ ಸ್ನೇಹಿ ಗಣಪನ ಆರಾಧನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಇವರ ಕಲಾಕೃತಿಗಳನ್ನು ವೇದಿಕೆಯ ಅಲಂಕಾರಕ್ಕೆ ಅಲ್ಲದೆ ಇವರ ಕಾಗದ ಕಲೆಯ ಕಾರ್ಯಾಗಾರವನ್ನು ಹಮ್ಮಿಕೊಂಡರೆ ಕಲೆಯ ಪ್ರಸಾರವೂ ಆಗುತ್ತದೆಂಬ ಅಭಿಪ್ರಾಯ ಅವರದು. ಈಗಾಗಲೇ ದೇಶದ ವಿವಿಧ ಸ್ಥಳಗಳಲ್ಲಿ ತಮ್ಮ ಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನು ಕೊಟ್ಟವರು. ತರಬೇತಿ ಶಿಬಿರಗಳನ್ನು ನಡೆಸಿಕೊಡುತ್ತಿರುವವರು.
ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ. ಮದುವೆ ಮನೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸುಗಳಿಸಿರುವ ಇವರು ಈಗ ಗಣಪನ ಎದುರಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಬಯಕೆ ವ್ಯಕ್ತಿಪಡಿಸಿದ್ದಾರೆ. ಇಮಾಮ್ ಸಾಬಿಗೂ ಗೋಕಲಾಷ್ಟಮಿಗೂ ಏನು ಸಂಬಂಧ ಎನ್ನುವವರಿಗೆ ಇವರ ಈ ಕಾರ್ಯಕಲ್ಪನೆ ಉತ್ತರವಾಗಬಹುದೇನೊ! ಎರಡು ಮೂರು ಗಂಟೆಗಳ ಕಾಲ ತಮ್ಮ ಕಲೆಯನ್ನು ಅನಾವರಣಗೊಳಿಸಿ ಬಂದ ಪ್ರೇಕ್ಷಕರನ್ನೂ ಕಲಾವಿದರನ್ನಾಗಿ ಬದಲಾಯಿಸುವ ಮೂಲಕ ಪರಿಸರಕ್ಕೆ ತನ್ನದೂ ಒಂದಿಷ್ಟು ಕೊಡುಗೆ ಇರಲಿ ಎನ್ನುತ್ತಾರೆ- ಪರಿಸರ ಪ್ರೇಮಿ, ಪರಿಸರ ಸ್ನೇಹಿ ಹುಸೇನಿ.
ಪರಿಸರ ಸ್ನೇಹಿಯಾಗಿ ಕಾಗದಗಣಪ
ಬಂಟ್ವಾಳ; ಆಷಾಢ ಮುಗಿದು ಶ್ರಾವಣ ಬಂತೆಂದರೆ ಹಬ್ಬಗಳ ಸರಮಾಲೆ. ಅಬಾಲವೃದ್ಧರಾಗಿ ಕಾಯುವುದು ಭಾದ್ರಪದ ಮಾಸಕ್ಕೆ. ಭಾದ್ರಪದ ಮಾಸದ ಹಬ್ಬಕ್ಕೆ ಶ್ರಾವಣ ಮಾಸದಿಂದಲೇ ತಯಾರಿ ಮಾಡಿಕೊಳ್ಳುವುದು ವಿಶೇಷ.
ಹೌದು ನೀವು ಊಹಿಸಿದಂತೆ ಗಣೇಶನ ಹಬ್ಬ. ಕನಿಷ್ಠ ಒಂದು ದಿನದಿಂದ ಒಂದು ತಿಂಗಳಿಗೂ ಹೆಚ್ಚು ಕಾಲ ಹಬ್ಬದ ಆಚರಣೆಯ ಸಂಭ್ರಮ. ಬಹುಶಃ ಭಾರತೀಯ ಹಬ್ಬಗಳ ಪೈಕಿ ಇಂತಹ ವೈಶಿಷ್ಟ್ಯತೆಯನ್ನು ಹೊಂದಿರುವುದು ಇದೊಂದೇ ಹಬ್ಬ. ದೇಶದಾದ್ಯಂತ ವಿವಿಧ ಶೈಲಿಗಳ ಮಣ್ಣಿನ ಅಥವ ಪಿ.ಒ.ಪಿಯಿಂದ ತಯಾರಿಸಿದ ಗಣಪತಿಗಳನ್ನು ಮಾಡಿ ಪೂಜಿಸಿ ನೀರಿಗೆ ಬಿಟ್ಟು ಸಂಭ್ರಮಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಚಳುವಳಿಗೆ ಪ್ರೇರಕ-ಪೂರಕ ವೇದಿಕೆಯಾಗಿದ್ದ ಈ ಗಣಪನ ಆರಾಧನೆ ಹಬ್ಬವಾಗಿ ಮಾರ್ಪಟ್ಟು ಇತ್ತೀಚಿನ ದಿನಗಳಲ್ಲಿ ಅದ್ದೂರಿತನಕ್ಕೆ ಮಣೆ ಹಾಕಿದೆ. ಅದ್ದೂರಿತನದ ಅಬ್ಬರದ ನಡುವೆ ಖರ್ಚಿನ ಹೆಸರಲ್ಲಿ ಹಣ ಸುಲಿಗೆ , ಸಾಂಸ್ಕೃತಿಕ ಕಾರ್ಯಕ್ರಮವೆಂಬ ಹೆಸರಿನಲ್ಲಿ ಸಮಾಜ ಮುಖಿಯಲ್ಲದ ಕಾರ್ಯಕ್ರಮಗಳ ಪ್ರದರ್ಶನ ಅಬ್ಬರದ ಕರ್ಕಶ ಶಬ್ದಗಳ ಘೋಷ್ಠಿಗಳು ನಾಗರೀಕತೆಗೆ ಪೂರಕವಗಿಲ್ಲದ ನೈತಿಕ ಅಧಃಪತನಕ್ಕೆ ಕಾರಣವಾಗುತ್ತಿದೆಯೋನೋ ಎಂಬ ಭಯ ಕಾಡುತ್ತಿದೆ. ಇವುಗಳೊಟ್ಟಿಗೆ ಮತ್ತೊಂದಿದೆ ಅಲಂಕಾರದ ಹೆಸರಿನಲ್ಲಿ ಪರಿಸರಕ್ಕೆ ಪೂರಕವಲ್ಲದ ಪ್ಲಾಸ್ಟಿಕ್, ರಾಸಾಯನಿಕ ಬಣ್ಣಗಳ ಬಳಕೆ.
ರಾಸಾಯನಿಕ ಬಣ್ಣಗಳ ಗಣಪನನ್ನು ಪಿ.ಒ.ಪಿಯಿಂದ ಮಾಡಿದ ಗಣಪನನ್ನು ನೀರಿಗೆ ಬಿಡುವುದರಿಂದ ನೀರು ಕಲುಷಿತಗೊಳ್ಳುತ್ತದೆಂಬ ಕನಿಷ್ಠ ಅರಿವು ಇಲ್ಲದಂತ ಪರಿಸ್ಥಿತಿ ಇಂದು ಎದುರಾಗಿದೆ. ನೀರು ಕಲುಷಿತಗೊಂಡಾಗ ಅದರಲ್ಲಿನ ಜಲಚರಗಳು ತೊಂದರಯನ್ನು ಅನುಭವಿಸುತ್ತವೆ. ಇದನ್ನು ಬಳಸುವ ಪಶುಗಳು ಜನಗಳು ಸಹ ತೊಂದರೆಗೀಡಾಗುತ್ತಾರೆ. ಇದಕ್ಕೆ ಬದಲಾಗಿ ಪರಿಸರ ಸ್ನೇಹಿ ಗಣಪನನ್ನು ಬಳಸಿಕೊಂಡರೆ…! ಬಣ್ಣರಹಿತ, ಶುದ್ದ ಮಣ್ಣಿನ ಗಣಪ, ಪರಿಸರ ಸ್ನೇಹಿ ಬಣ್ಣಗಳ ಗಣಪನನ್ನು ಬಳಸಿಕೊಂಡರೆ ಇಂಥ ಜಲಮಾಲಿನ್ಯದಿಂದ ಸ್ವಲ್ಪಮಟ್ಟಿಗಾದರೂ ಹೊರಬರಬಹುದು. ಪರಿಸರಸ್ನೇಹಿ ಕಾಗದದ ಕಲಾಕೃತಿಗಳನ್ನು ಅಲಂಕಾರಕ್ಕೆ ಬಲಸಿಕೊಂಡರೆ ಮುಂದಿನ ಪೀಳಿಗೆಗೆ ಒಂದಿಷ್ಟು ಆರೋಗ್ಯವಂತ ಸಮಾಜವನ್ನು ಕೊಡುಗೆಯಾಗಿ ಕೊಡಬಹುದು.
ಇಂಥದೊಂದು ಸಣ್ಣ ಪ್ರಯತ್ನ ಹುಸೇನಿಯವರಿಂದ. ‘ಮೈಸೂರು ಹುಸೇನಿ’ ಎಂದೇ ಹೆಸರಾಗಿರುವ ಇವರು ಸಾಂಜಿûೀ ಕಲೆಯ ಕಲಾವಿದರು. ಕೈಗೊಂದು ಕಾಗದ ಕತ್ತರಿ ಕೊಟ್ಟರೆ ಸಾಕು ಅದಕ್ಕೆ ಕಲ್ಪನೆಯ ಕಲೆಯನ್ನು ಸೇರಿಸಿ ಅದ್ಭುತ ಕಲಾಕೃತಿಯೊಂದನ್ನು ಕ್ಷಣಮಾತ್ರದಲ್ಲಿ ಸೃಷ್ಟಿಸಿ ನಿಮ್ಮ ಮುಂದೆ ಅನಾವರಣಗೊಳಿಸುತ್ತಾರೆ. ಇಂತಹ ಕಲಾಕೃತಿಗಳನ್ನು ಗಣಪನ ಆಲಂಕಾರಕ್ಕೆ ಬಳಸಿಕೊಂಡರೆ ……..!!
ಅದ್ಭುತವಾದ ಯೋಚನೆಯೊಂದು ಅವರಿಗೆ ಹೊಳೆದದ್ದೆ ಕಾರ್ಯರೂಪಕ್ಕೂ ತರಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಕಡೆ ಸಾಫಲ್ಯವನ್ನು ಗಳಿಸಿದ್ದಾರೆ.
“ಪರಿಸರ ಗಣಪ” ಎಂಬ ಕಲ್ಪನೆಯೊಂದರಿಂದ ಇಂದು ಅವರ ಕೈಯಲ್ಲಿ ಅರಳಿದ ಗಣಪನ ಕಲಾಕೃತಿಗಳು ನೋಡಲು ಸುಂದರವಾಗಿದ್ದು ನೋಡುವವರನ್ನು ಸೆಳೆಯುವುದಲ್ಲದೆ ತಾವೂ ಮಾಡಬೇಕೆಂಬ ಹಂಬಲ ಮೂಡುತ್ತದೆ. ಹಂಬಲ ಹೊರಬಂದ ತಕ್ಷಣ ನಿಮ್ಮ ಕೈಗೊಂದು ಕತ್ತರಿ ಮತ್ತು ಕಾಗದವನ್ನು ಕೊಟ್ಟು ನಿಮ್ಮ ಕಲ್ಪನೆಯ ಕಲಾಕೃತಿ ಅರಳಲು ಅವಕಾಶ ನೀಡುತ್ತಾರೆ. ಒಂದೆರಡು ಬಾರಿ ಸೋತರೂ ಐದಾರು ಪ್ರಯತ್ನಗಳಲ್ಲಿ ನಿಮ್ಮ ಮುಖದಲ್ಲೊಂದು ಮುಗುಳು ನಗೆ ತೇಲಿಹೋಗುವುದು ಶತಸಿದ್ಧ.
‘ಸಾಂಜಿûೀ ಕಲಾ ಲೋಕ’ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿರುವ ಇವರು ಪರಿಸರದ ಪ್ರೇಮಿಯಾಗಿ ಪರಿಸರ ಸ್ನೇಹಿ ಗಣಪನ ಆರಾಧನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಇವರ ಕಲಾಕೃತಿಗಳನ್ನು ವೇದಿಕೆಯ ಅಲಂಕಾರಕ್ಕೆ ಅಲ್ಲದೆ ಇವರ ಕಾಗದ ಕಲೆಯ ಕಾರ್ಯಾಗಾರವನ್ನು ಹಮ್ಮಿಕೊಂಡರೆ ಕಲೆಯ ಪ್ರಸಾರವೂ ಆಗುತ್ತದೆಂಬ ಅಭಿಪ್ರಾಯ ಅವರದು. ಈಗಾಗಲೇ ದೇಶದ ವಿವಿಧ ಸ್ಥಳಗಳಲ್ಲಿ ತಮ್ಮ ಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆಗಳನ್ನು ಕೊಟ್ಟವರು. ತರಬೇತಿ ಶಿಬಿರಗಳನ್ನು ನಡೆಸಿಕೊಡುತ್ತಿರುವವರು.
ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ. ಮದುವೆ ಮನೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸುಗಳಿಸಿರುವ ಇವರು ಈಗ ಗಣಪನ ಎದುರಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಬಯಕೆ ವ್ಯಕ್ತಿಪಡಿಸಿದ್ದಾರೆ. ಇಮಾಮ್ ಸಾಬಿಗೂ ಗೋಕಲಾಷ್ಟಮಿಗೂ ಏನು ಸಂಬಂಧ ಎನ್ನುವವರಿಗೆ ಇವರ ಈ ಕಾರ್ಯಕಲ್ಪನೆ ಉತ್ತರವಾಗಬಹುದೇನೊ! ಎರಡು ಮೂರು ಗಂಟೆಗಳ ಕಾಲ ತಮ್ಮ ಕಲೆಯನ್ನು ಅನಾವರಣಗೊಳಿಸಿ ಬಂದ ಪ್ರೇಕ್ಷಕರನ್ನೂ ಕಲಾವಿದರನ್ನಾಗಿ ಬದಲಾಯಿಸುವ ಮೂಲಕ ಪರಿಸರಕ್ಕೆ ತನ್ನದೂ ಒಂದಿಷ್ಟು ಕೊಡುಗೆ ಇರಲಿ ಎನ್ನುತ್ತಾರೆ- ಪರಿಸರ ಪ್ರೇಮಿ,ಪರಿಸರ ಸ್ನೇಹಿ ಹುಸೇನಿ.
.ಮೌನೇಶ್ ವಿಶ್ವಕರ್ಮ.