ಬಂಟ್ವಾಳ: ಯುವಕರ ಶಕ್ತಿಯನ್ನು ಸಮಾಜ ಮುಖಿ ಕೆಲಸಗಳಿಗೆ ಬಳಸಿದಾಗ ಮಾದರಿ ಗ್ರಾಮವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಅ ನಿಟ್ಟಿನಲ್ಲಿ ಈ ಗ್ರಾಮದ ಸಂಘಟನೆಗಳು ಕೆಲಸ ಮಾಡುತ್ತವೆ ನಿಜಕ್ಕೂ ಇವರ ಕೆಲಸ ಶ್ಲಾಘನೀಯ ಎಂದು ಮಾಜಿ ಜಿ.ಪಂ.ಸದಸ್ಯ ಎ.ಸಿ.ಭಂಡಾರಿ ಹೇಳಿದರು. ಅವರು ಶಾರದಾಂಬಿಕಾ ಭಜನಾ ಮಂದಿರ ಶಾರದಾನಗರದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ಮಂಗಳೂರು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮತ್ತು ಶ್ರೀ ಶಾರದಾಂಬಿಕಾ ಮಂದಿರ ಶಾರದಾನಗರ, ಹಿಂದೂ ಜಾಗರಣಾ ವೇದಿಕೆ ಶಾರದಾನಗರ ಮತ್ತು ನೇತ್ರಾವತಿ ಬಳಗ ಮಂಜಲ್ಪಾದೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಸಾಮರಸ್ಯದ ಬದುಕು ಮತ್ತು ಜನರ ಪ್ರೀತಿ, ವಿಶ್ವಾಸವನ್ನು ಗಳಿಸಲು ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಮಾಹಾಬಲ ಕೊಟ್ಟಾರಿ ಆಲಾಡಿ, ಕೃಷಿಕ ಲಕ್ಷ್ಮೀನಾರಾಯಣ ಭಟ್ಟ್, ಸಜೀಪ ಮುನ್ನೂರು ಗ್ರಾ.ಪಂ.ಸದಸ್ಯರಾದ ನರೇಂದ್ರ ಬೆಳ್ಚಾಡ, ಪ್ರಮೀಳಾ ಗಟ್ಟಿ, ಶ್ರೀ ಶಾರದಾಂಬಿಕಾ ಮಂದಿರದ ಗೌರವಾಧ್ಯಕ್ಷ ಮಾರಪ್ಪ ಕೊಟ್ಟಾರಿ, ಅಧ್ಯಕ್ಷ ಜಯಂತ ಗಟ್ಟಿ, ಪ್ರಮುಖರಾದ ಅರವಿಂದ ಭಟ್ಟ್, ವಿಶ್ವನಾಥ ಪೂಜಾರಿ, ರೋಹಿತ್, ಶರತ್ ಆಲಾಡಿ, ಗಣೇಶ್, ಸುಕೇಶ್ಮತ್ತು ಕಿರಣ್ ಉಪಸ್ಥಿತರಿದ್ದರು. ವಿಶ್ವನಾಥ ಕೊಟ್ಟಾರಿ ಸ್ವಾಗತಿಸಿ, ಯಶವಂತ ಶಾರದಾನಗರ ವಂದಿಸಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರ ನಿರೂಪಿಸಿದರು
