ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ನಗರವಾಗಿ ಬೆಳೆಯುತ್ತಿರುವ ಗ್ರಾಮೀಣ ಪ್ರದೇಶ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ದಾದಿಯರು ಮತ್ತಿತರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಇಲ್ಲಿನ ಸಾವಿರಾರು ಮಂದಿ ಬಂಟ್ವಾಳ, ಮೂಡುಬಿದ್ರೆ ಮತ್ತು ಪುಂಜಾಲಕಟ್ಟೆ ಆಸ್ಪತ್ರೆಗಳನ್ನು ಅವಲಂಭಿಸುವಂತಾಗಿದೆ.
ಈ ಆಸ್ಪತ್ರೆಯಲ್ಲಿ ಜನರೇಟರ್, ಆಂಬುಲೆನ್ಸ್ ಮತ್ತಿತರ ಮೂಲ ಸೌಕರ್ಯಗಳ ಕೊರತೆಯೂ ಗಂಭೀರವಾಗಿದ್ದು, ಕೂಡಲೇ ವೈದ್ಯರು ಮತ್ತು ದಾದಿಯರು ಮತ್ತಿತರ ಸಿಬ್ಬಂದಿಗಳನ್ನು ನೇಮಿಸಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಇದೇ 14ರಂದು ಬೆಳಿಗ್ಗೆ ಹತ್ತೂವರೆ ಗಂಟೆಗೆ ಇಲ್ಲಿನ ಬಿಜೆಪಿ ವತಿಯಿಂದ ಬೃಹತ್ ರಸ್ತೆತಡೆ ಪ್ರತಿಭಟನೆ ಆಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ

By suddi9

Leave a Reply

Your email address will not be published. Required fields are marked *