ಮಂಗಳೂರು : ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸಿ ಪ್ರಮಂಗಳೂರು : ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸಿ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ `ದಬಕ್ ದಬಾ ಐಸ’ ತುಳು ಚಲನ ಚಿತ್ರದ ಚಿತ್ರೀಕರಣ ಸೆ.14 ಸೋಮವಾರ ದಿಂದ ಮಂಗಳೂರಿನಲ್ಲಿ ಪ್ರಾರಂಭಗೊಳ್ಳಲಿದೆ.ಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ `ದಬಕ್ ದಬಾ ಐಸ’ ತುಳು ಚಲನ ಚಿತ್ರದ ಚಿತ್ರೀಕರಣ ಸೆ.14 ಸೋಮವಾರ ದಿಂದ ಮಂಗಳೂರಿನಲ್ಲಿ ಪ್ರಾರಂಭಗೊಳ್ಳಲಿದೆ.
ರೋಹನ್ ಮೊಂತೆರೋ ನಿರ್ಮಾಪಕತ್ವದ ಈ ಚಿತ್ರವನ್ನು ಶಶಿರಾಜ್ ಕಾವೂರು ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ ಉತ್ಪಲ್ ನಯನಾರ್, ಸಂಗೀತ ರಾಜೇಶ್ ಎಂ.ಮಂಗಳೂರು, ಕಲೆ ತಮ್ಮ ಲಕ್ಷ್ಮಣ್, ಚಿತ್ರದಲ್ಲಿ ಒಟ್ಟು 4 ಹಾಡು ಇದ್ದು ದೇವದಾಸ್ ಕಾಪಿಕಾಡ್, ಕದ್ರಿ ನವನೀತ ಶೆಟ್ಟಿ, ವೀರೇಂದ್ರ ಶೆಟ್ಟಿ ಕಾವೂರು, ಶಶಿರಾಜ್ ಕಾವೂರು ಸಾಹಿತ್ಯ ಒದಗಿಸಿದ್ದಾರೆ.
ಚಾಲಿಪೋಲಿಲು ತುಳು ಚಲನ ಚಿತ್ರದ ಬಳಿಕ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ ಜತೆಯಾಗಿ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ಶೀತಲ್ ಈ ಚಿತ್ರದ ಮೂಲಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಇನ್ನುಳಿದಂತೆ ಲಕ್ಷ್ಮಣ್ ಕುಮಾರ್ ಮಲ್ಲೂರು, ಸುರೇಂದ್ರ ಬಂಟ್ವಾಳ, ಗಿರೀಶ್ ಶೆಟ್ಟಿ ಕಟೀಲು, ಸುಧೀರ್ ರಾಜ್ ಉರ್ವಾ, ಸರೋಜಿನಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಬೈಲೂರು, ಸತೀಶ್ ಬಂದಲೆ, ರವಿ ಸುರತ್ಕಲ್, ಸೋಮು ಜೋಗಟ್ಟೆ, ಹರೀಶ್ ಕಡಂದಲೆ, ಶೋಭಾ ಶಕ್ತಿನಗರ, ಸುಜಾತ ಶಕ್ತಿನಗರ, ಪ್ರಶಾಂತ್ ಕೊಂಚಾಡಿ, ಸದಾಶಿವದಾಸ್, ಮೋಹನ್ ಕೊಪ್ಪಲ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮನೋಹರ್ ಶೆಟ್ಟಿ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಚೇತಕ್ ಪೂಜಾರಿ, ವಿನೋದ್ ಎಕ್ಕೂರು, ಚಂದ್ರಹಾಸ ಕದ್ರಿ ಮೊದಲಾದವರು ಅಭಿನಯಿಸುತ್ತಿದ್ದಾರೆ.
ಡಾ| ಹಂಸರಾಜ್ ಆಳ್ವ, ಮತ್ತು ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಪಿ.ಬಿ.ಹರೀಶ್ ರೈ, ಆಗ್ನೆಲ್ ರೊಡ್ರಿಗಸ್, ನರೇಶ್ ಕುಮಾರ್ ಸಸಿಹಿತ್ಲು, ಶಶಿಧರ ಬೆಳ್ಳಾಯರು, ಸುನೀಲ್ ಕೃಷ್ಣಾಪುರ, ಪ್ರವೀಣ್ ನೀರ್ಮಾರ್ಗ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ವಿನಯ ಕೃಷ್ಣ , ಬಿೃಜೇಶ್ ಗರೋಡಿ, ರಾಜೇಶ್ ಶೆಟ್ಟಿ, ಗಿರೀಶ್ ಮಳಲಿ ಮೊದಲಾದವರು ಚಿತ್ರದಲ್ಲಿದ್ದಾರೆ.
ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ದಬಕ್ ದಬಾ ಐಸ ಚಿತ್ರ 21 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಹಾಗೂ ಸುರತ್ಕಲ್, ಬೋಂದೆಲ್, ಶಕ್ತಿನಗರದಲ್ಲಿ ಚಿತ್ರೀಕರಣ ನಡೆಯಲಿದೆ. `ದಬಕ್ ದಬಾ ಐಸ’ ಚಿತ್ರ ಸಂಪೂರ್ಣ ಹಾಸ್ಯ ಚಿತ್ರವಾಗಿದ್ದು, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶಗಳಿವೆ ಎಂದು ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.
