ಮಂಗಳೂರು: ಬೈಕ್‍ನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ಸ್ವಿಫ್ಟ್ ಕಾರಿನಲ್ಲಿ ಬೆನ್ನಟ್ಟಿದ ತಂಡವೊಂದು ಆತನ ಮೇಲೆ ತಲವಾರಿನಿಂದ ದಾಳಿ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಲ್ಯಾನ್ಸಿ(30) ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
02

unnamed (1
ಲ್ಯಾನ್ಸಿ ಬೈಕ್‍ನಲ್ಲಿ ಮನೆಯತ್ತ ತೆರಳುತ್ತಿದ್ದು ಈ ವೇಳೆ ದುಷ್ಕರ್ಮಿಗಳು ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿದ್ದರು. ಲ್ಯಾನ್ಸಿ ಚೆಂಬುಗುಡ್ಡೆ ಬರುವಷ್ಟರಲ್ಲಿ ಕಾರಿನಿಂದ ಬೈಕ್‍ಗೆ ಡಿಕ್ಕಿ ಹೊಡೆಸಿದ್ದು, ಲ್ಯಾನ್ಸಿ ಕೆಳಕ್ಕೆ ಬೀಳುತ್ತಲೇ ಆತನ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾರೆ. ಲ್ಯಾನ್ಸಿ ಕೈ, ತಲೆಯ ಭಾಗಕ್ಕೆ ಹತ್ತಾರು ಬಾರಿ ದಾಳಿ ನಡೆಸಿದ್ದು, ಆನಂತರ ಲ್ಯಾನ್ಸಿ ನೆಲಕ್ಕೊರಗಿದ್ದನ್ನು ಕಂಡು ಪರಾರಿಯಾಗಿದ್ದಾರೆ.
ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಯತೀಶ್‍ನನ್ನು 2014ರಂದು ತೊಕ್ಕೊಟ್ಟಿನ ಮಾಯಾ ಬಾರ್‍ನ ಎದುರು ಕೊಲೆಗೈಯ್ಯಲಾಗಿದ್ದು, ಲ್ಯಾನ್ಸಿ ಎರಡನೇ ಆರೋಪಿಯಾಗಿದ್ದ. ಇದರ ದ್ವೇಷದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

By Suddi9

Leave a Reply

Your email address will not be published. Required fields are marked *