ಬಂಟ್ವಾಳ: 1975ನೇ ಇಸವಿಯಲ್ಲಿ ನಮ್ಮ ದೇಶದಲ್ಲಿ ಜಾರಿಯಾಗಿದ್ದ ತುರ್ತುಪರಿಸ್ಥಿತಿಗೆ ಇದೀಗ 2015ರ ಈ ವರ್ಷ 40 ವರ್ಷಗಳು ತುಂಬಿದವು. ಅಂದಿನ ದೇಶದ ಸ್ಥಿತಿ-ಗತಿ, ಹೋರಾಟ, ಪ್ರೇರಣೆ, ಪರಿಣಾಮ ಈ ಎಲ್ಲ ವಿಚಾರಗಳನ್ನು ವಿಶ್ಲೇಷಿಸಲು ಕಲ್ಲಡ್ಕದ ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ದಿ:15.09.2015ರ ಮಂಗಳವಾರದಂದು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಚಾರಸಂಕಿರಣ ಬೆಳಗ್ಗೆ 10ರಿಂದ ಸಂಜೆ 3.30ರವರೆಗೆ ಏರ್ಪಡಿಸಲಾಗಿದೆ. ಅಂದು ಮಂಗಳೂರು, ಉಡುಪಿ, ಕೊಡಗು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿಯ ಸಂದರ್ಭ ಸತ್ಯಾಗ್ರಹದಲ್ಲಿ ಭಾಗವಹಿಸಿದ, ಮೀಸಾಬಂಧಿಗಳಾಗಿದ್ದ ಎಲ್ಲರನ್ನೂ ಈ ವಿಚಾರ ಸಂಕಿರಣಕ್ಕೆ ಆಹ್ವನಿಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಪರಿಷತ್ ಸಭಾಪತಿಗಳಾದ ಡಿ.ಹೆಚ್.ಶಂಕರಮೂರ್ತಿ, ರಾ.ಸ್ವ.ಸಂಘದ ಹಿರಿಯ ಪ್ರಚಾರಕ ಶ್ರೀ.ಸು.ರಾಮಣ್ಣ, ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯವಾದಿ ಹೆಬ್ರಿ ಬಾಲಕೃಷ್ಣ ಮಲ್ಯ, ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಹಾಗೂ ಕಲ್ಲಡ್ಕ ಡಾ| ಪ್ರಭಾಕರ ಭಟ್ ಭಾಗವಹಿಸಲಿದ್ದಾರೆ.
ನೀವುಗಳು 1975ರ ತುರ್ತುಪರಿಸ್ಥಿತಿಯ ಹೋರಾಟದಲ್ಲಿ ಒಂದಲ್ಲ ಒಂದು ವಿಧದಲ್ಲಿ ಭಾಗವಹಿಸಿದವರಾಗಿದ್ದಲ್ಲಿ ಅಥವಾ ಈ ವಿಚಾರಸಂಕಿರಣದಲ್ಲಿ ಭಾಗವಹಿಸಲು ಆಸಕ್ತರಿದ್ದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿಳಾಸ ತಿಳಿಸಿ. ನಿಮಗೆ ಆಮಂತ್ರಣ ಪತ್ರಿಕೆ ಹಾಗೂ ಇನ್ನಿತರ ವಿವರಗಳನ್ನು ಕಳುಹಿಸಿಕೊಡುತ್ತೇವೆ. ಯಾ ಈ ಕೆಳಗಿನ ವ್ಯಾಟ್ಸಪ್, ಫೇಸ್ಬುಕ್, ಈ ಮೇಲ್ ವೆಬ್ಸೈಟನ್ನು ಸಂಪರ್ಕಿಸಬಹುದು. ನೇರವಾಗಿ ಬರುವವರು ದಿನಾಂಕ;13.09.2015ರೊಳಗೆ ದೂರವಾಣಿ ಮುಖಾಂತರ ತಿಳಿಸಿದಲ್ಲಿ ವ್ಯವಸ್ಥೆಗೆ ಅನುಕೂಲವಾಗುವುದು, ಹಾಗೂ ತುರ್ತುಪರಿಸ್ಥಿತಿಯ ಸಂದರ್ಭದ ಕೆಲವು ಅಪರೂಪದ ಭಾವಚಿತ್ರ, ಭೂಗತ ಪತ್ರಿಕೆಗಳ ಪ್ರತಿಗಳಿದ್ದಲ್ಲಿ ನಮಗೆ ತಿಳಿಸಿದಲ್ಲಿ ಅಂದು ಹಾಕಲಾಗುವ ಪ್ರದರ್ಶಿನಿಯಲ್ಲಿ ಎಲ್ಲವನ್ನೂ ಜೋಡಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕಾರ್ಯಕ್ರಮದ ಸಂಚಾಲನಾ ಸಮಿತಿಯ ಪ್ರಕಟಣೆ ತಿಳಿಸಿದೆ. ಸಂಪರ್ಕಿಸಬೇಕಾದ ದೂರವಾಣಿ :- 9964280734 (ಕೃಷ್ಣಪ್ರಸಾದ- ಪ್ರಾಚಾರ್ಯರು), 7760707575 (ಶಿಲ್ಪಾ –ಗುಮಾಸ್ತೆ), 8762696465 (ರೇಖಾ-ಉಪನ್ಯಾಸಕರು), 9449728763 (ಕುಶಾಲಪ್ಪ – ಗಣಕವಿಭಾಗ), ವೆಬ್ಸೈಟ್ – ತಿತಿತಿ.sಡಿvಞ.oಡಿg ಈ ಮೇಲ್ : iಟಿಜಿo@sಡಿvಞ.oಡಿg
