ಸುದ್ದಿ9:ಕೈಕಂಬ; ಗುರುಪುರದಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆಇಬ್ಬರು ದಾರುಣವಾಗಿ ಮೃತಪಟ್ಟರೆ ಓರ್ವ ಮಹಿಳೆಯನ್ನು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಇನ್ನೋರ್ವ ವ್ಯಕ್ತಿಗೂ ಗಾಯಗೊಂಡಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ಮೃತಪಟ್ಟವರು ದೆಹಲಿ ಮೂಲದವರೆಂದು ತಿಳಿದು ಬಂದಿದ್ದು ಮಂಗಳೂರು ಏರ್ಪೋಟರ್್ನಲ್ಲಿ ಪೊಲೀಸ್ ವೃತ್ತಿಯಲ್ಲಿ ತೊಡಗಿದ್ದರು. ಇವರ ಬೈಕ್ನಲ್ಲೂ ಸಹ ಪೊಲೀಸ್ ಎಂದು ನಮೂದಿಸಲಾಗಿದೆ. ಪಲ್ಸರ್ ಬೈಕ್ ಉತ್ತರಾಖಾಂಡದ ನೋಂದಾವಣಿಯನ್ನು ಹೊಂದಿದ್ದು ಯುಕೆ08ಎನ್7308 ನಂಬರಿನ ಬೈಕ್ ಇದಾಗಿದೆ. ದೆಹಲಿಯಿಂದ ತನ್ನ ಕುಟುಂಬವರ್ಗವನ್ನು ಬಜ್ಪೆಗೆ ಕರೆದುಕೊಂಡು ಬಂದಿದ್ದು ಕೆಂಜಾರು ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಮೃತರನ್ನು ಹಷರ್ಿತಾ(2.5) ಹಾಗೂ ಬಾಬು(18) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಜಸ್ವಿನ್ದಾರ್(32) ಎಂದು ಗುರುತಿಸಲಾಗಿದ್ದು ಇನ್ನೋರ್ವರಾದ ದೀಪಕ್(40) ಎಂಬವರು ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ: ಗುರುಪುರದ ಜಂಕ್ಷನ್ನಲ್ಲಿ ಮತದಾನದ ಕರ್ತವ್ಯಕ್ಕೆ ಬಂದಿದ್ದ ಬಸ್ ರಸ್ತೆಯ ಇನ್ನೊಂದು ಬಲಬದಿಯ ರಸ್ತೆಯಿಂದ ಹಿಂದಕ್ಕೆ ತೆಗೆಯಲು ಯತ್ನಿಸುತ್ತಿತ್ತು. ಈ ವೇಳೆ ಗುರುಪುರದ ಹೆದ್ದಾರಿಯಲ್ಲಿ ಗುರುಪುರ ಕೈಕಂಬದಿಂದ ಬರುತ್ತಿದ್ದ ಬುಲೆರೋ ವಾಹನ ರಸ್ತೆಯ ಬದಿಯಲ್ಲಿ ನಿಂತು ಬಸ್ಗೆ ಹಿಂದಿರುಗಲು ದಾರಿ ಮಾಡಿಕೊಡಲು ನಿಂತಿತ್ತು. ಇದೇ ಸಂದರ್ಭದಲ್ಲಿ ಪಲ್ಸರ್ ಬೈಕ್ ಸಹ ಇದರ ಪಕ್ಕದಲ್ಲೇ ನಿಂತಿತ್ತು. ಈ ವೇಳೆ ವೇಗದಿಂದ ಹಾಗೂ ಅತಿ ನಿರ್ಲಕ್ಷ್ಯದಿಂದ ಬಂದ ಮರಳು ಸಾಗಾಟದ ಕೆಎ 19ಎ 3395 ಎಂಬ ನಂಬರಿನ ನವರತ್ನ ಎಂಬ ಹೆಸರುಳ್ಳ ಟಿಪ್ಪರ್ ಬುಲೆರೋ ವಾಹನದ ಎದುರು ಭಾಗಕ್ಕೆ ಡಿಕ್ಕಿ ಹೊಡೆದು ಬಳಿಕ ಎದುರು ನಿಂತಿದ್ದ ಪಲ್ಸರ್ ಬೈಕ್ನ ಮೇಲೆಯೇ ಹರಿದು ಅಲ್ಲಿಂದ ಗಾಡಿಯನ್ನು ನಿಲ್ಲಿಸಿದೆ ಪರಾರಿಯಾಗಿದ್ದಾನೆ.
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಟಿಪ್ಪರ್ನ ಅಡಿಗೆ ಬಿದ್ದಿದ್ದು ಬೈಕ್ನಲ್ಲಿದ್ದ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು ಇನ್ನೋರ್ವರಿಗೂ ಸಣ್ಣಪುಟ್ಟ ಗಾಯಗಳಾಗಿತ್ತು. ಈ ಸಂದರ್ಭ ತಕ್ಷಣ ಸ್ಥಳೀಯರು ಜಮಾಯಿಸಿದ್ದು ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದಾರೆ.
ಆಪತ್ಬಾಂಧವನಾದ ರಫೀಕ್:
ಗುರುಪುರದ ಜೀಪ್ ಡ್ರೈವರ್ ರಫೀಕ್ ಎಂಬವರು ಅಂಬ್ಯುಲೆನ್ಸ್ಗೂ ಕಾಯದೆ ತಕ್ಷಣ ತನ್ನ ಜೀಪನ್ನು ಸ್ಥಳಕ್ಕೆ ತಂದು ಗಾಯಗೊಂಡ ಮೂವರನ್ನು ಜೀಪಿನಲ್ಲಿರಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಎರಡೂವರೆ ವರ್ಷದ ಮಗು ಜೀಪಿನಲ್ಲೇ ವಿಲವಿಲನೆ ಒದ್ದಾಡುತ್ತಿತ್ತು. ಉಳಿದವರು ಪ್ರಜ್ಞಾಹೀನರಾಗಿದ್ದರು.
ಆಸ್ಪತ್ರೆಯಲ್ಲಿ ದಾಖಲಿಸುತ್ತಿದ್ದಂತೆ ಗಾಯಗೊಂಡ ಯುವಕ ಬಾಬು ಹಾಗೂ ಮಗು ಹಷರ್ಿತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಪೈಕಿ ಜಸ್ವಿನ್ದಾರ್ ಮಹಿಳೆಯ ತೊಡೆ ಸಂಪೂರ್ಣ ಬಿಚ್ಚಿಹೋಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಟಿಪ್ಪರ್ ಡಿಕ್ಕಿಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ದೇಹ ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ದೇಹದ ಒಳಗಿನ ಪಿತ್ತಕೋಶ, ಕಿಡ್ನಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಹರಡಿಕೊಂಡಿತ್ತು.
ಪರಾರಿಯಲ್ಲಿ ಸಿಕ್ಕಿಬಿದ್ದ ಟಿಪ್ಪರ್:
ವಾಹನಗಳೆರಡಕ್ಕೆ ಡಿಕ್ಕಿ ಹೊಡೆದು ತಪ್ಪಿಸಿಕೊಂಡ ಟಿಪ್ಪರ್ ಚಾಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದು ಆತನನ್ನು ಅಟ್ಟಿಸಿಕೊಂಡು ಹೋಗಿದ್ದರು. ಕನೆಗೂ ವಾಮಂಜೂರಿನ ಪರಾರಿಯಲ್ಲಿ ಟಿಪ್ಪರ್ ಚಾಲಕ ಸಿಕ್ಕಿಬಿದ್ದಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗುರುಪುರದ ರಸ್ತೆ ತೀರಾ ಸಪೂರವಾಗಿದ್ದು ಅಪಘಾತಗಳು ನಡೆಯುತ್ತಲೇ ಇದೆ. ಸುಮಾರು ಮೂರು ತಿಂಗಳ ಹಿಂದೆಯೂ ತೈಲ ಸಾಗಾಟದ ಟ್ಯಾಂಕರ್ ರಸ್ತೆಯ ಬದಿಯ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟರೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದೇ ವರ್ಷ ಇಪ್ಪತ್ತಕ್ಕೂ ಅಧಿಕ ಅಪಘಾತ ಘಟನೆ ನಡೆದಿದ್ದು ಅದರಲ್ಲಿ ಹಲವರು ಮಂದಿ ಗಾಯಗೊಂಡ ಉದಾಹರಣೆ ಇದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




