ಬಂಟ್ವಾಳ : ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲಾ ಸಾರ್ವಜನಿಕರು , ಮಕ್ಕಳು ಪರಸ್ಪರ ಸೌಹಾರ್ದತೆಯೊಂದಿಗೆ ಭಾಗವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ನುಡಿದರು. ಅವರು ಸ್ತ್ರೀ ಶಕ್ತಿ ಭವನ ಬಿ.ಸಿ.ರೋಡ್ ನಲ್ಲಿ ನಡೆದ ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಪಂ.ಸದಸ್ಯ ಮಾಧವ ಮಾವೆ, ಎಫ್ರೆಂ ಸಿಕ್ವೇರಾ , ಸಕ್ರಮ-ಸಕ್ರಮ ಸದಸ್ಯೆ ಫ್ಲೋಸಿ ಡಿಸೋಜ, ಆರಾದನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಸದಸ್ಯ ಯೂಸುಫ್ ಕರಂದಾಡಿ , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಯಾದವಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಪೆರುವಾಯಿ , ಯಾದವಸಭಾ ತಾಲೂಕು ಅಧ್ಯಕ್ಷ ಎಸ್.ಗೋಪಾಲ್, ಉಪತಹಶೀಲ್ದಾರ್ ಪರಮೇಶ್ವರ ನಾಯಕ್, ಕಂದಾಯ ಅಧಿಕಾರಿ ನಾರಾಯಣ ಪೂಜಾರಿ ಉಪಸ್ಥಿತರಿದ್ದರು. ಪ್ರಾದ್ಯಾಪಕ ನಾಗರಾಜ್ ಅಳಿಕೆ ಪ್ರಧಾನ ಭಾಷಣಗೈದರು. ಸ್ಪರ್ಧೆಯಲ್ಲಿ ವಿಜೇತರಾದ ಯಾದವ ಸಮುದಾಯದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ತಹಶಿಲ್ದಾರ್ ಪುರಂದರ ಹೆಗಡೆ ಸ್ವಾಗತಿಸಿದರು. ಉಪತಹಶೀಲ್ದಾರ್ ಪರಮೇಶ್ವರ ಮೊಯಿಲಿ ವಂದಿಸಿ ರಂಗನಿರ್ದೇಶಕ ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.
