ಕೈಕಂಬ: ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೆ.4ರಂದು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡು ಮರುದಿನ ಶನಿವಾರ ಬೆಳಗ್ಗೆ 8 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಪ್ತಾಹ ನಡೆಯಲಿದೆ. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಪರಮ ಪೂಜ್ಯ ಸ್ವಾಮಿ ಬೋಧಸ್ವರೂಪಾನಂದಾಜೀ ಮಹರಾಜ್ ಅಖಂಡ ಭಜನೆಗೆ ಚಾಲನೆ ನೀಡಲಿದ್ದಾರೆ.
download (1)
ಸೆ.5 ರಂದು 10ರಿಂದ 11.30 ರವರೆಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ, ಅಭಿಷೇಕ ,ಮಹಾಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ಮಧ್ಯಾಹ್ನ 1.30ರಿಂದ 5.30ರವರೆಗೆ ಮಕ್ಕಳ ಛದ್ಮವೇಷ ಸ್ಪರ್ಧೆ ಬಹುಮಾನ ವಿತರಣೆ ಸೆ.6ರಂದು ಭಾನುವಾರ ಸಾಯಂಕಾಲ 3 ರಿಂದ ರಾತ್ರಿ 8 ಗಂಟೆಯವರೆಗೆ ಶ್ರೀ ಕೃಷ್ಣ ಲೀಲೋತ್ಸವ ಶ್ರೀ ಕೃಷ್ಣನ ಮೆರವಣಿಗೆ ಮೊಸರುಕುಡಿಕೆ ಉತ್ಸವ ಜರಗಲಿದೆ ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *