ಕೈಕಂಬ: ಬಡಗಬೆಳ್ಳೂರು: ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ಆಶ್ರಯದಲ್ಲಿ 9ನೇ ವರ್ಷದ ಮೊಸರುಕುಡಿಕೆ ಉತ್ಸವವು ಸೆ. 6ರಂದು ಭಾನುವಾರ ಬೆಳಗ್ಗೆ ಗಂಟೆ 9ಕ್ಕೆ ಸಂಘದ ವಠಾರದಲ್ಲಿ ಉದ್ಘಾಟನೆಗೊಂಡು ಸಾಯಂಕಾಲ 6ಗಂಟೆಗೆ ಸಮರೋಪ ಸಮಾರಂಭವು ಜರಗಲಿದೆ.

ಇದರ ಉದ್ಘಾಟನೆಯನ್ನು ಬಳ್ಳಿಮನೆ ಪ್ರಸನ್ನ ಭಂಡಾರಿ ಉದ್ಘಾಟಿಸಲಿದ್ದಾರೆ. ಅಮ್ಟಾಡಿ ಗ್ರಾ.ಪಂ.ಸದಸ್ಯ ಸುಧಾಕರ ಶೆಟ್ಟಿಭಾಗಂತ್ರಬೈಲು, ಕಾವೇಶ್ವರ ಭಕ್ತವೃಂದದ ಆದ್ಯಕ್ಷ ಚಿದಾನಂದ ಬಂಗೇರಾ, ಅಧ್ಯಕ್ಷತೆಯನ್ನು ನಾಸಿಕ್ ಉದ್ಯಮಿ ಕೃಷ್ಣಪ್ಪ ಪೂಜಾರಿ ಕುಕ್ಕಾಜೆ ವಹಿಸಲಿದ್ದಾರೆ. ಬಡಗಬೆಳ್ಳೂರು ಗ್ರಾ. ಪಂ. ಸದಸ್ಯ ಅನುಪ್ ಸುಮಿತ್ ಫೆರ್ನಾಂಡಿಸ್, ಕೃಷಿಕ ಉಮೇಶ್ ಶೆಟ್ಟಿ ಪರಿಮೊಗರು ಭಾಗವಹಿಸಲಿದ್ದಾರೆ ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಎಂದು ಕಾವೇಶ್ವರ ಭಕ್ತವೃಂದದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *