ಮೂಡುಬಿದಿರೆ: ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ನಡೆಸಿದ ಸಾರ್ವತ್ರಿಕ ಮುಷ್ಕರಕ್ಕೆ ಮೂಡುಬಿದಿರೆಯಲ್ಲಿ ವಿವಿಧ ರೀತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
DSC00276

DSC00273

20150901222117 (3)

20150901222118 (2)
ಖಾಸಗಿ ಬಸ್ಗಳಿಂದ ತುಂಬಿಹೋಗಿದ್ದ ಮೂಡುಬಿದರೆ ಸರ್ವೆಸ್ ಬಸ್ ನಿಲ್ದಾಣದಲ್ಲಿ, 5-6 ಬಸ್ಗಳನ್ನು ಪಾರ್ಕ್ ಮಾಡಿದ್ದು, ಬಿಟ್ಟರೆ ಓಡಾಟವಿರಲಿಲ್ಲ. ಮುಖ್ಯ ರಸ್ತೆಯಲ್ಲಿ ಕಾರು, ದ್ವಿಚಕ್ರ ವಾಹನ ಕಂಡುಬಂದರೂ ಎಂದಿನಂತೆ ಇರಲಿಲ್ಲ.
ಪ್ರತಿದಿನ ಮುಂಜಾನೆ 8 ಗಂಟೆಯಿಂದ 10ಗಂಟೆಯವರೆಗೆ ಶಾಲಾ-ಕಾಲೇಜು ವಾಹನ, ಖಾಸಗಿ ಬಸ್, ಖಾಸಗಿ ವಾಹನ ದಟ್ಟನೆಯಿಂದ ಕೂಡಿದ್ದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಕಂಡುಬಂದಿದೆ. ಜನರಿಗೆ ಮುಷ್ಕರದ ಬಗ್ಗೆ ಸ್ಪಷ್ಟ ಮಾಹಿತಿಯಿದ್ದ ಕಾರಣ, ಪೇಟೆಯಲ್ಲಿ ಜನರ ಸಂಖ್ಯೆಯೂ ವಿರಳವಾಗಿದ್ದು, ಹೆಚ್ಚಿನ ಅಂಗಡಿಯವರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಅಲ್ಲೊಂದು ಇಲ್ಲೊಂದು ಅಂಗಡಿಗಳು ತೆರೆದಿದ್ದವು.

ಮಂಗಳೂರಿನಲ್ಲಿ ಮೂಡುಬಿದಿರೆಯ ಖಾಸಗಿ ಕಾಲೇಜಿನ ಬಸ್ಗೆ ಕಲ್ಲು ಎಸೆದಿದ್ದು, ವಾಟ್ಸ್ ಅಪ್ನಲ್ಲಿ ಮೂಡುಬಿದಿರೆಯಲ್ಲೇ ಆಗಿದೆ ಎಂದು ಬಿಂಬಿಸಲಾಗಿದೆ. ಆದರೆ ಈ ಘಟನೆ ಸತ್ಯಕ್ಕೆ ದೂರವಾಗಿದ್ದು, ಮೂಡುಬಿದಿರೆಯಲ್ಲಿ ಯಾವುದೇ ಅಹಿತಕರ ಘಟನೆಯಾಗಿಲ್ಲ

By suddi9

Leave a Reply

Your email address will not be published. Required fields are marked *