ಬಂಟ್ವಾಳ, ಆ. 31: ಅಂತರ್ಜಾಲದ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬಿ.ಸಿ.ರೋಡ್ ನಿವಾಸಿ ಭುವಿತ್ ಶೆಟ್ಟಿ (25) ಅವರನ್ನು ಬಂಟ್ವಾಳ ನಗರ ಪೊಲೀಸರು ಬಂಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹಿಂದುತ್ವವನ್ನು ಹೀಯಾಳಿಸಿದ ಡಾ| ಕಲಬುರ್ಗೆ ಆಗಿರುವ ಗತಿ ಮುಂದಕ್ಕೆ ಕೆ.ಎಸ್. ಭಗವಾನ್ ಅವರಿಗೆ ಎಂಬ ಎಚ್ಚರಿಕೆಯ ಸಂದೇಶವನ್ನು ಅಂತರ್ಜಾಲ ವಾಟ್ಸಪ್ ಮತ್ತು ಟ್ವಿಟರ್ನಲ್ಲಿ ಹರಿಯಬಿಟ್ಟಿದ್ದು ಜಿಲ್ಲಾ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಸ್ವಯಂ ಪ್ರೇರಿತರಾಗಿ ಜೀವ ಬೆದರಿಕೆ ಮತ್ತು ದೊಂಬಿ ಪ್ರಚೋದನೆ ಪ್ರಕರಣ ದಾಖಲಿಸಿದ್ದರು.

By suddi9

Leave a Reply

Your email address will not be published. Required fields are marked *