ಬಂಟ್ವಾಳ; ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರವಾಗಿ ಸೋಮವಾರ ಸಂಜೆ ಬಿಜೆಪಿ, ಪರಿವಾರ ಸಂಘಟನೆಯ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಬಿ.ಸಿ.ರೋಡು, ಬಂಟ್ವಾಳ ಪೇಟೆಯಲ್ಲಿ ಪಾದಯಾತ್ರೆಯ ಮೂಲಕ ಮತಯಾಚಿಸಿದರು.
ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಹೊರಟ ಪಾದಯಾತ್ರೆಯು ಬಿ.ಸಿ.ರೋಡಿನ ರಾಜರಸ್ತೆಯಲ್ಲಿ ಸಾಗಿ ಬಂಟ್ವಾಳ ಕೆಳಗಿನ ಪೇಟೆ, ರಥಬೀದಿ, ಮಾರ್ಕೆಟ್ ರಸ್ತೆಯಲ್ಲಿ ಮುಂದುವರಿದು ಬಡ್ಡಕಟ್ಟೆಯ ನಿತ್ಯಾನಂದ ಭಜನಾಮಂದಿರದ ಬಳಿ ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ಅಂಗಡಿಮುಂಗಟ್ಟಿಗಳಿಗೆ ಕರಪತ್ರಗಳನ್ನು ಹಂಚಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಮುಖಂಡರು ಮತಯಾಚನೆಗೈದರು.
ಚಿತ್ರ ಕಿಶೋರ್ ಪೆರಾಜೆ

ಪಕ್ಷದ ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಬಿಜೆಪಿಯ ಜಿ.ಆನಂದ, ಸುಲೋಚನಾ ಜಿಕೆ ಭಟ್, ಚೆನ್ನಪ್ಪ ಕೋಟ್ಯಾನ್, ದಿನೇಶ್ ಭಂಡಾರಿ, ಪುರುಷ ಎನ್ ಸಾಲ್ಯಾನ್, ಗೋವಿಂದ ಪ್ರಭು, ಸುಗುಣ ಕಿಣಿ,ಭಾಸ್ಕರ ಟೈಲರ್, ಆನಂದ ಶಂಭೂರು, ರವೀಂದ್ರ ಕಂಬಳಿ, ಪುಷ್ಪರಾಜ ಶೆಟ್ಟಿ, ಚರಣ್ ಜುಮಾದಿ ಗುಡ್ಡೆ, ರೊನಾಲ್ಡ್ ಡಿ’ಸೋಜ,ದೇವಪ್ಪಪೂಜಾರಿ, ಉಸ್ಮಾನ್ ಪಾಣೆಮಂಗಳೂರು, ಸರಪಾಡಿ ಅಶೋಕ್ ಶೆಟ್ಟಿ,ನಳಿನಿ ಶೆಟ್ಟಿ, ಸುರೇಶ್ ಕುಲಾಲ್, ಸುರೇಶ್ ಟೈಲರ್ ಮೊದಲಾದವರು ಉಪಸ್ಥಿತರಿದ್ದರು

